
ಪಣಜಿ: ಅಮೋನಿಯಂ ಅನಿಲ ಸೋರಿಕೆಯಾದ ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ದಕ್ಷಿಣ ಗೋವಾದ ಕುಂಕೋಲಿಮ್ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ನಡೆದಿದೆ.
ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿರುವ ಸಮುದ್ರ ಆಹಾರ ಸಂಸ್ಕರಣಾ ಘಟಕದಲ್ಲಿ ಶುಕ್ರವಾರ ಮುಂಜಾನೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ
"ಘಟಕದ ಆವರಣದಲ್ಲಿ ಸೋರಿಕೆಯಾದ ಅಮೋನಿಯಂ ಅನಿಲವನ್ನು ಉಸಿರಾಡಿದ ನಂತರ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇತರ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ"
"ಕಾರ್ಮಿಕರು ನಿದ್ದೆ ಮಾಡುವಾಗ ಈ ಘಟನೆ ಸಂಭವಿಸಿದೆ" ಎಂದು ಅವರು ಹೇಳಿದರು. ಏತನ್ಮಧ್ಯೆ ಇಂಡಸ್ಟ್ರಿಯಲ್ ಎಸ್ಟೇಟ್ ಅನ್ನು ನಿರ್ವಹಿಸುವ ಗೋವಾ ಕೈಗಾರಿಕಾ ಅಭಿವೃದ್ಧಿ ನಿಗಮ (ಜಿಐಡಿಸಿ) ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದೆ.
ಜಿಐಡಿಸಿ ಅಧ್ಯಕ್ಷ ಗ್ಲೆನ್ ಟಿಕ್ಲೊ ಅವರು ಈ ಹಿಂದೆ ಕಾರ್ಖಾನೆಯ ನಿರ್ವಹಣೆ, ಸ್ಥಾವರ ಸ್ಥಿತಿಯ ಬಗ್ಗೆ ನೋಟಿಸ್ ನೀಡಿದ್ದರು, ಆದರೆ ಈ ಬಗ್ಗೆ ನಿರ್ಲಕ್ಷ ತಾಳಲಾಗಿತ್ತು, ಆದರೆ ಈ ಘಟನೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
Advertisement