ಇತ್ತ ಗಡಿಯಲ್ಲಿ ಘರ್ಷಣೆ; ಅತ್ತ ಚೀನಾದಲ್ಲಿ ಭಾರತೀಯ ವೈದ್ಯ ಡಾ. ದ್ವಾರಕನಾಥ್ ಕೊಟ್ನಿಸ್‌ ಸ್ಮರಣೆ!

ಒಂದೆಡೆ ಭಾರತ-ಚೀನಾ ಗಡಿಯಲ್ಲಿ ಘರ್ಷಣೆ, ಸಂಘರ್ಷದ ಪರಿಸ್ಥಿತಿಯನ್ನು ತಿಳಿಗೊಳಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ. ಮತ್ತೊಂದೆಡೆ  ಕ್ರಾಂತಿಯ ಸಮಯದಲ್ಲಿ ಭಾರತ ತನ್ನ ರಾಷ್ಟ್ರಕ್ಕೆ ನೀಡಿದ್ದ ಕೊಡುಗೆಯನ್ನು ಚೀನಾ ಸ್ಮರಿಸುತ್ತಿದೆ. 
ಭಾರತೀಯ ವೈದ್ಯ ಡಾ. ದ್ವಾರಕನಾಥ್ ಕೊಟ್ನಿಸ್‌
ಭಾರತೀಯ ವೈದ್ಯ ಡಾ. ದ್ವಾರಕನಾಥ್ ಕೊಟ್ನಿಸ್‌
Updated on

ಒಂದೆಡೆ ಭಾರತ-ಚೀನಾ ಗಡಿಯಲ್ಲಿ ಘರ್ಷಣೆ, ಸಂಘರ್ಷದ ಪರಿಸ್ಥಿತಿಯನ್ನು ತಿಳಿಗೊಳಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ. ಮತ್ತೊಂದೆಡೆ  ಕ್ರಾಂತಿಯ ಸಮಯದಲ್ಲಿ ಭಾರತ ತನ್ನ ರಾಷ್ಟ್ರಕ್ಕೆ ನೀಡಿದ್ದ ಕೊಡುಗೆಯನ್ನು ಚೀನಾ ಸ್ಮರಿಸುತ್ತಿದೆ. 

ಮಾವೋ ಝೆಡಾಂಗ್ ನೇತೃತ್ವದಲ್ಲಿ ಚೀನಾದಲ್ಲಿ ಕ್ರಾಂತಿ ನಡೆಯುತ್ತಿದ್ದ ಸಮಯ, ಈ ಮಧ್ಯೆ ಎರಡನೇ  ವಿಶ್ವಯುದ್ಧವೂ ನಡೆಯುತ್ತಿತ್ತು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಮೂಲದ ಡಾ. ದ್ವಾರಕನಾಥ್ ಕೊಟ್ನಿಸ್‌ ಚೀನಾದಲ್ಲಿ ಸೇವೆ ಸಲ್ಲಿಸಿದ್ದರು. 

ಅ.11 ರಂದು ಡಾ.ದ್ವಾರಕನಾಥ್ ಕೊಟ್ನಿಸ್ ಅವರ 110 ನೇ ಜನ್ಮದಿನೋತ್ಸವದ ಅಂಗವಾಗಿ ಆನ್ ಲೈನ್ ನಲ್ಲಿ ಮೂಲಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚೀನಾದ ರಾಯಭಾರಿ ಕಚೇರಿ ಅಧಿಕಾರಿ ಮಾ-ಜಿಯಾ, ಚೀನಾ ಹಾಗೂ ಭಾರತದ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿ, ಚೀನಾಗೆ ಡಾ.ದ್ವಾರಕನಾಥ್ ಕೊಟ್ನಿಸ್ ಅವರ ಸೇವೆಯನ್ನು ಸ್ಮರಿಸಿ ಗೌರವ ಸಲ್ಲಿಸಿದ್ದಾರೆ. 

ವಿದೇಶಗಳೊಂದಿಗಿನ ಸ್ನೇಹಕ್ಕಾಗಿ ಇರುವ ಚೀನಾದ ಪೀಪಲ್ಸ್ ಒಕ್ಕೂಟ (CPAFFC) ನ ಅಧ್ಯಕ್ಷರಾಗಿರುವ ಲಿನ್ ಸಾಂಗ್ಟಿಯನ್ ಮಾತನಾಡಿದ್ದು, ಡಾ.ಕೊಟ್ನಿಸ್ ಅವರ ಬಗ್ಗೆ ಮಾತನಾಡಿದ್ದು, ಭಾರತ-ಚೀನಾ ದ್ವಿಪಕ್ಷೀಯ ಸಂಬಂಧ, ಸಾಂಸ್ಕೃತಿಕ ಕೊಡು-ಕೊಳ್ಳುವಿಕೆಯ ಬಗ್ಗೆಯೂ ಹೇಳಿದ್ದಾರೆ. 

ಈ ವರ್ಷ ಭಾರತ-ಚೀನಾದ ರಾಜತಾಂತ್ರಿಕ ಸಂಬಂಧ ಸ್ಥಾಪನೆಯಾಗಿ 70 ನೇ ವಾರ್ಷಿಕೋತ್ಸವಕ್ಕೆ ಸಾಕ್ಷಿಯಾಗಿದೆ. ಜಗತ್ತು ಹಿಂದೆಂದೂ ಕಂಡಿರದ ಮಹತ್ವದ ಬದಲಾವಣೆಗಳನ್ನು ನೋಡಿದ್ದು, ಚೀನಾ-ಭಾರತದ ಸಂಬಂಧದಲ್ಲಿಯೂ ತಾತ್ಕಾಲಿಕವಾದಂತಹ ಸಂಕಷ್ಟ ತಲೆದೋರಿದೆ, ನಾವು ಅತ್ಯಂತ ಗೌರವ ಘನತೆಗಳಿಂದ, ಅತ್ಯಂತ ಮಹತ್ವಪೂರ್ಣವಾದ ಡಾ. ಕೊಟ್ನಿಸ್ ಅವರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದೇವೆ, ಡಾ. ಕೊಟ್ನಿಸ್ ಅವರ ಮಾನವೀಯ ಮೌಲ್ಯಗಳನ್ನು ಎರಡೂ ದೇಶಗಳ ಯುವಕರು ಮುನ್ನಡೆಸಬೇಕಿದೆ ಎಂದು ಲಿನ್ ಸಾಂಗ್ಟಿಯನ್ ಹೇಳಿದ್ದಾರೆ. 

ವಿಶ್ವಯುದ್ಧ-2 ರ ಸಮಯದಲ್ಲಿ ಚೀನಾಗೆ ಸಹಾಯ ಮಾಡಲು 1938 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇಲ್ಲಿಂದ ಚೀನಾಗೆ ಕಳಿಸಿದ್ದ 5 ಸದಸ್ಯರೊನ್ನೊಳಗೊಂಡ ವೈದ್ಯರ ತಂಡದಲ್ಲಿ ಡಾ. ಕೊಟ್ನಿಸ್ ಸಹ ಇದ್ದರು. ಚೀನಾದಲ್ಲೇ ಇದ್ದ ಕೊಟ್ನಿಸ್ ಚೀನಾ ಪ್ರಜೆ ಗುವೊ ಕಿಂಗ್ಲಾನ್ ಅವರನ್ನು ವಿವಾಹವಾಗಿದ್ದರು. 1942 ರಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷವನ್ನು ಸೇರಿದ್ದ  ಕೊಟ್ನಿಸ್ ಅದೇ ವರ್ಷ ಇಹ ಲೋಕ ತ್ಯಜಿಸಿದ್ದರು.

ಚೀನಾಗೆ ಕೊಟ್ನಿಸ್ ಕೊಟ್ಟಿದ್ದ ವೈದ್ಯಕೀಯ ನೆರವನ್ನು ಚೀನಾದ ನಾಯಕ ಮಾವೋ ಝೆಡಾಂಗ್ ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚೀನಾದ ಹಲವು ನಗರಗಳಲ್ಲಿ ಕೊಟ್ನಿಸ್ ಅವರ ಸ್ಮಾರಕಗಳಿವೆ. 

ಡಾ.ಕೊಟ್ನಿಸ್ ಕಾರ್ಯನಿರ್ವಹಿಸಿದ್ದ ಹೆಬೀ ಪ್ರಾಂತ್ಯದ ಶಿಜಿಯಾಜ್ಯೂಂಗ್ ನಲ್ಲಿರುವ ವೈದ್ಯಕೀಯ ಶಾಲೆಯಲ್ಲಿ ಕೊಟ್ನಿಸ್ ಅವರ ಪುತ್ಥಳಿ ಇದ್ದು ಅದಕ್ಕೆ ಕೆ ಡಿಹುವಾ ಎಂದೇ ನಾಮಕರಣ ಮಾಡಲಾಗಿದ್ದು. ಶಿಜಿಯಾಜ್ಯೂಂಗ್ ಕೆ ಡಿಹುವಾ ವೈದ್ಯಕೀಯ ವಿಜ್ಞಾನ ಮಾಧ್ಯಮಿಕ ವಿಶೇಷ ಶಾಲೆ ಎಂದೇ ಗುರುತಿಸಿಕೊಂಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com