17 ದಿನಗಳಲ್ಲಿ 1 ಲಕ್ಷ ಮಂದಿಗೆ ಆರೋಗ್ಯ ಸೇವೆ: ದಾಖಲೆ ಬರೆದ ಇ-ಸಂಜೀವಿನಿ

ಆರೋಗ್ಯ ಸಚಿವಾಲಯ ಆರಂಭಿಸಿರುವ ಇ-ಸಂಜೀವಿನಿ ಯೋಜನೆ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು ಕೇವಲ 17 ದಿನಗಳಲ್ಲಿ 1 ಲಕ್ಷ ಮಂದಿಗೆ ವೈದ್ಯರ ಸಂಪರ್ಕ ಸೇವೆ ಮತ್ತು 5 ಲಕ್ಷ ಮಂದಿಗೆ ಟೆಲಿ-ಕನ್ಸಲ್ಟೇಷನ್ ಸೇವೆ ನೀಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಆರೋಗ್ಯ ಸಚಿವಾಲಯ ಆರಂಭಿಸಿರುವ ಇ-ಸಂಜೀವಿನಿ ಯೋಜನೆ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು ಕೇವಲ 17 ದಿನಗಳಲ್ಲಿ 1 ಲಕ್ಷ ಮಂದಿಗೆ ವೈದ್ಯರ ಸಂಪರ್ಕ ಸೇವೆ ಮತ್ತು 5 ಲಕ್ಷ ಮಂದಿಗೆ ಟೆಲಿ-ಕನ್ಸಲ್ಟೇಷನ್ ಸೇವೆ ನೀಡಲಾಗಿದೆ.

ಹೌದು.. ಕೇಂದ್ರ ಆರೋಗ್ಯ ಸಚಿವಾಲಯದ ಇ-ಸಂಜೀವಿನಿ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ವೈದ್ಯರ ಸಂಪರ್ಕ ಸೇವೆಯನ್ನು ಕಳೆದ 17 ದಿನಗಳಲ್ಲಿ 1 ಲಕ್ಷ ಮಂದಿ ಪಡೆದಿದ್ದಾರೆ. ಅಂತೆಯೇ 5 ಲಕ್ಷ ಮಂದಿಗೆ ಟೆಲಿ-ಕನ್ಸಲ್ಟೇಷನ್ ಸೇವೆ ನೀಡಲಾಗಿದೆ ಎಂದು ತಿಳಿದುಬಂದಿದೆ.  

ಸ್ವಸ್ಥ ಭಾರತ ಯೋಜನೆಯಡಿಯಲ್ಲಿ ಆರಂಭಿಸಲಾಗಿದ್ದ, ಈ ಸೇವೆ ದಿನಗಳದಂತೆ ಖ್ಯಾತಿ ಪಡೆಯುತ್ತಿದ್ದು, ಪ್ರಮುಖವಾಗಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಈ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಮನೆಯಲ್ಲೇ ಕುಳಿತು ವೈದ್ಯರಿಂದ ಆರೋಗ್ಯ ಸೇವೆ ಪಡೆಯುವ ಸೇವೆ  ಇದಾಗಿದೆ. ಈ ಸೇವೆಯಲ್ಲಿ ಎರಡು ವಿಧಗಳಿದ್ದು, ಮೊದಲನೆಯದ್ದು ವೈದ್ಯರಿಂದ ವೈದ್ಯರಿಗೆ (ಇ–ಸಂಜೀವಿನಿ), ಎರಡನೇಯದ್ದು ರೋಗಿಯಿಂದ ವೈದ್ಯರಿಗೆ (ಇ–ಸಂಜೀವಿನಿ ಒಪಿಡಿ).

‘ಕೋವಿಡ್‌–19ನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಸಮಯದಲ್ಲಿ ರೋಗಿಗಳಿಗೆ ಅಗತ್ಯ ಸಲಹೆ ಹಾಗೂ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಈ ವರ್ಷದ ಏಪ್ರಿಲ್‌ 13ರಂದು ಇ– ಸಂಜೀವಿನಿ ಒಪಿಡಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಸದ್ಯ 23 ರಾಜ್ಯಗಳಲ್ಲಿ ಇ–ಸಂಜೀವಿನಿ ಯೋಜನೆ  ಅನುಷ್ಠಾನಗೊಳಿಸಲಾಗಿದೆ. ಉಳಿದ ರಾಜ್ಯಗಳೂ ಈ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ’ ಎಂದೂ ಸಚಿವಾಲಯ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com