ಭಾರತೀಯ ಯೋಧರಿಗೆ ಪುಟ್ಟ ಬಾಲಕನಿಂದ 'ಹೈ ಜೋಶ್' ಸೆಲ್ಯೂಟ್, ವಿಡಿಯೋ ವೈರಲ್!

ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ಉಪಟಳಕ್ಕೆ ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರ ನೀಡುತ್ತಿದೆ. ಇದೇ ವೇಳೆ ಲಡಾಖ್ ನ ಪುಟ್ಟ ಬಾಲಕನೋರ್ವ ಭಾರತೀಯ ಯೋಧರಿಗೆ ಸೆಲ್ಯೂಟ್ ಮಾಡಿದ್ದು ಯೋಧರಿಗೆ ಇದು ಮತ್ತಷ್ಟು ಆತ್ಮಸ್ಥೈರ್ಯ ತುಂಬಿದಂತಾಗಿದೆ. 
ಬಾಲಕನ ಸೆಲ್ಯೂಟ್
ಬಾಲಕನ ಸೆಲ್ಯೂಟ್
Updated on

ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ಉಪಟಳಕ್ಕೆ ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರ ನೀಡುತ್ತಿದೆ. ಇದೇ ವೇಳೆ ಲಡಾಖ್ ನ ಪುಟ್ಟ ಬಾಲಕನೋರ್ವ ಭಾರತೀಯ ಯೋಧರಿಗೆ ಸೆಲ್ಯೂಟ್ ಮಾಡಿದ್ದು ಯೋಧರಿಗೆ ಇದು ಮತ್ತಷ್ಟು ಆತ್ಮಸ್ಥೈರ್ಯ ತುಂಬಿದಂತಾಗಿದೆ. 

ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ತಂಡವೊಂದು ತೆರಳುತ್ತಿದ್ದಾಗ ಪುಟ್ಟ ಬಾಲಕನೋರ್ವ ಸೆಲ್ಯೂಟ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಬಾಲಕ ಸೆಲ್ಯೂಟ್ ಮಾಡುತ್ತಿರುವ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದ ಐಟಿಬಿಪಿ ವಿಡಿಯೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋವನ್ನು ಕಂಡ ನೆಟಿಗರು ಬಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಲಡಾಖ್ ನ ಚುಶುಲ್ ನಲ್ಲಿ ಈ ಘಟನೆ ನಡೆದಿದ್ದು ಬಾಲಕನ ಹೆಸರು ನಾಮ್ಗ್ಯಾಲ್ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com