ಕಣಿವೆ ರಾಜ್ಯದಲ್ಲಿ ವಿಧಿ 370 ಪುನಃಸ್ಥಾಪನೆಗೆ ಕೈ ಜೋಡಿಸಿದ ಶತ್ರು ಪಕ್ಷಗಳು; ಮೆಹಬೂಬಾ ಮುಫ್ತಿ, ಫಾರೂಕ್ ಆಬ್ದುಲ್ಲಾ ಮೈತ್ರಿಕೂಟ ಘೋಷಣೆ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿ 370ರ ಪುನಃಸ್ಥಾಪನೆಗಾಗಿ ಬದ್ಧ ಶತ್ರುಗಳು ಎಂದೇ ಕರೆಯಲ್ಪಡುತ್ತಿದ್ದ ಮೆಹಬೂಬಾ ಮುಫ್ತಿ ಮತ್ತು ಫಾರೂಕ್ ಆಬ್ದುಲ್ಲಾ ಪರಸ್ಪರ ಕೈ ಜೋಡಿಸಿದ್ದು ಮೈತ್ರಿಕೂಟ ಘೋಷಣೆ ಮಾಡಿದ್ದಾರೆ.
ಮೆಹಬೂಬಾ ಮುಫ್ತಿ-ಅಬ್ದುಲ್ಲಾ ಬಿಡುಗಡೆ ಯಾವಾಗ?: ಉತ್ತರಿಸಲು ನಿರಾಕರಿಸಿದ ಸರ್ಕಾರ!
ಮೆಹಬೂಬಾ ಮುಫ್ತಿ-ಅಬ್ದುಲ್ಲಾ ಬಿಡುಗಡೆ ಯಾವಾಗ?: ಉತ್ತರಿಸಲು ನಿರಾಕರಿಸಿದ ಸರ್ಕಾರ!
Updated on

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿ 370ರ ಪುನಃಸ್ಥಾಪನೆಗಾಗಿ ಬದ್ಧ ಶತ್ರುಗಳು ಎಂದೇ ಕರೆಯಲ್ಪಡುತ್ತಿದ್ದ ಮೆಹಬೂಬಾ ಮುಫ್ತಿ ಮತ್ತು ಫಾರೂಕ್ ಆಬ್ದುಲ್ಲಾ ಪರಸ್ಪರ ಕೈ ಜೋಡಿಸಿದ್ದು ಮೈತ್ರಿಕೂಟ ಘೋಷಣೆ ಮಾಡಿದ್ದಾರೆ.

ಮುಫ್ತಿ ಮೆಹಬೂಬಾ ನೇತೃತ್ವದ ಪಿಡಿಪಿ ಮತ್ತು ಫಾರೂಕ್ ಆಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಕಣಿವೆ ರಾಜ್ಯದ ಹಲವು ರಾಜಕೀಯ ಪಕ್ಷಗಳು ಈ ಮೈತ್ರಿಕೂಟದಲ್ಲಿರಲಿದ್ದು, ಸಜ್ಜದ್ ಲೋನ್ ಸೇರಿದಂತೆ ಹಲವು ಸ್ಥಳೀಯ ಪಕ್ಷಗಳು ಮತ್ತು ಸ್ಥಳೀಯ ನಾಯಕರು ಮೈತ್ರಿಕೂಟದಲ್ಲಿರಲಿದ್ದಾರೆ ಎಂದು  ಹೇಳಲಾಗಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಮೈತ್ರಿಕೂಟದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು, ಕಣಿವೆ ರಾಜ್ಯದಲ್ಲಿ ಶತಾಯಗತಾಯ ವಿಧಿ 370ರ ಪುನಃ ಸ್ಥಾಪನೆ ಮಾಡಬೇಕಿದ್ದು, ಇದಕ್ಕಾಗಿ ನಾವು ದೊಡ್ಡ ಮೈತ್ರಿಕೂಟ ರಚನೆ ಮಾಡಿದ್ದೇವೆ. ಈ ಮೈತ್ರಿಕೂಟದ ಹೆಸರು 'ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕಾರ್ ಡಿಕ್ಲೇರೇಷನ್'  ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಅಂತೆಯೇ ನಮ್ಮ ಯುದ್ಧವು ಸಾಂವಿಧಾನಿಕ ಯುದ್ಧವಾಗಿದ್ದು, ಭಾರತ ಸರ್ಕಾರವು 2019 ರ ಆಗಸ್ಟ್ 5 ರ ಮೊದಲು ನಾವು ಹೊಂದಿದ್ದ ಹಕ್ಕುಗಳನ್ನು ರಾಜ್ಯದ ಜನರಿಗೆ ಹಿಂದಿರುಗಿಸಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದರು.

ನಿನ್ನೆಯಷ್ಟೇ 14 ತಿಂಗಳ ಅವಧಿಯ ಗೃಹ ಬಂಧನದಿಂದ ಬಿಡುಗಡೆಯಾಗಿದ್ದ ಮೆಹಬೂಬಾ ಮುಫ್ತಿ ಅವರನ್ನು ಭೇಟಿಯಾಗಿದ್ದ ನ್ಯಾಶನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹಾಗೂ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಅವರು ರಾಜಕೀಯ ಸ್ಥಿತಿಗತಿಗಳ ಕುರಿತು ಮಾತುಕತೆ ನಡೆಸಿದ್ದರು. ಭೇಟಿ ಬಳಿಕ  ಮಾತನಾಡಿದ್ದ ಮುಫ್ತಿ ಮೆಹಬೂಬಾ ಅವರು, 'ನನ್ನ ನಿವಾಸಕ್ಕೆ ಫಾರೂಕ್ ಸರ್ ಹಾಗೂ ಉಮರ್ ಸರ್ ಅವರು ಭೇಟಿ ನೀಡಿರುವುದು ಒಳ್ಳೆಯ ವಿಚಾರ. ಅವರ ಮಾತುಗಳನ್ನು ಕೇಳಿ ನನ್ನಲ್ಲಿ ಧೈರ್ಯ ಮೂಡಿದೆ. ನಾವೆಲ್ಲ ಸಂಘಟಿತರಾಗಿ ಉತ್ತಮ ಬದಲಾವಣೆ ತರಬಹುದು ಎಂಬ ಖಾತರಿ ನನಗಿದೆ ಹೇಳಿದ್ದರು. 

ಈ ಬೆಳವಣಿಗೆಯಾದ 24 ಗಂಟೆಗಳ ಅಂತರದಲ್ಲೇ ಎಲ್ಲ ಪಕ್ಷಗಳೂ ಮೈತ್ರಿಕೂಟ ಘೋಷಣೆ ಮಾಡಿರುವುದು ಕುತೂಹಲ ಕೆರಳಿಸಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com