ನವದೆಹಲಿ: ನವರಾತ್ರಿಯ ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಉಡುಗೊರೆಗಳನ್ನು ರವಾನಿಸಿದ್ದಾರೆ.
ನಾಲ್ಕು ಸೀರೆಗಳು ಮತ್ತು 10 ಕೆಜಿ ಸಿಹಿತಿಂಡಿಗಳನ್ನು ಅಭಿನಂದನಾ ಟಿಪ್ಪಣಿಯೊಂದಿಗೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಉಡುಗೊರೆಯಾಗಿ ಕಳುಹಿಸಿದ್ದಾರೆ.
ಸೋಮವಾರ ದುರ್ಗಾ ತೃತೀಯಾದಂದು ಬಂದ ಉಡುಗೊರೆಗಳನ್ನು ಕೋಲ್ಕತಾದ ಬಂಗಾಳ ಸಚಿವಾಲಯದ ನಬನ್ನಾದಲ್ಲಿ ಬಾಂಗ್ಲಾದೇಶದ ಉಪ ಹೈಕಮಿಷನರ್ ಟೌಫಿಕ್ ಹಸನ್ ಅವರು ಮಮತಾ ಬ್ಯಾನರ್ಜಿಯವರಿಗೆ ಹಸ್ತಾಂತರಿಸಿದ್ದಾರೆ.
Advertisement