10ಕ್ಕಿಂತ 19 ಚಿಕ್ಕದು ಅಂತ ಗೊತ್ತಿರಲಿಲ್ಲ: ಬಿಜೆಪಿಯ 19 ಲಕ್ಷ ಉದ್ಯೋಗ ಭರವಸೆಗೆ ಚಿದಂಬರಂ ಟಾಂಗ್

ಬಿಹಾರ ಚುನಾವಣಾ ಪ್ರಣಾಳಿಕೆಯಲ್ಲಿ ಆರ್ ಜೆಡಿಯ 10 ಲಕ್ಷ ಉದ್ಯೋಗದ ಭರವಸೆಯನ್ನು ಅಪಹಾಸ್ಯ ಮಾಡಿದ್ದ ಬಿಜೆಪಿ ಸ್ವತಃ ಈಗ 19 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದೆ.
ಪಿ ಚಿದಂಬರಂ
ಪಿ ಚಿದಂಬರಂ
Updated on: 

ನವದೆಹಲಿ: ಬಿಹಾರ ಚುನಾವಣಾ ಪ್ರಣಾಳಿಕೆಯಲ್ಲಿ ಆರ್ ಜೆಡಿಯ 10 ಲಕ್ಷ ಉದ್ಯೋಗದ ಭರವಸೆಯನ್ನು ಅಪಹಾಸ್ಯ ಮಾಡಿದ್ದ ಬಿಜೆಪಿ ಸ್ವತಃ ಈಗ 19 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದೆ. ಆದರೆ 10ಕ್ಕಿಂತ 19 ಚಿಕ್ಕದು ಅಂತ ನನಗೆ ಗೊತ್ತಿರಲಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಅವರು ಟಾಂಗ್ ನೀಡಿದ್ದಾರೆ.

ಬಿಜೆಪಿ ಗುರುವಾರ ಬಿಡುಗಡೆ ಮಾಡಿದ ಬಿಹಾರ ಚುನಾವಣಾ ಪ್ರಣಾಳಿಕೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ 19 ಲಕ್ಷ ಉದ್ಯೋಗ ನೀಡುವ ಭರವಸೆಯೊಂದಿಗೆ ಯುವಕರನ್ನು ಸೆಳೆಯಲು ಯತ್ನಿಸಿದೆ. ಆದರೆ ಇದಕ್ಕು ಮುನ್ನ 10 ಲಕ್ಷ ಉದ್ಯೋಗದ ಸೃಷ್ಟಿ ಅಸಾಧ್ಯ ಎಂದು ಆರ್ ಜೆಡಿ ಭರವಸೆಯನ್ನು ಅಪಹಾಸ್ಯ ಮಾಡಿತ್ತು.

"19 ಕ್ಕಿಂತ 10 ಚಿಕ್ಕದಾಗಿದೆ ಎಂದು ನನಗೆ ತಿಳಿದಿರಲಿಲ್ಲ. ನಾನು ಮತ್ತೆ ಪ್ರಾಥಮಿಕ ಶಾಲೆಗೆ ಹೋಗಬೇಕು ಎಂದು ಭಾವಿಸುತ್ತೇನೆ" ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ಅವರು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com