
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಕೊರೋನಾವೈರಸ್ ಸೋಂಕಿಗೆ ಪಾಸಿಟಿವ್ ವರದಿ ಪಡೆಇದಿರುವುದಾಗಿ ಭಾನುವಾರ ಹೇಳಿಕೊಂಡಿದ್ದಾರೆ.
63 ವರ್ಷದ ಶಕ್ತಿಕಾಂತ್ ದಾಸ್ ತಮ್ಮ ಟ್ವಿಟ್ಟರ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಕೋವಿಡ್ ಗೆ ಪಾಸಿಟಿವ್ ವರದಿ ಪಡೆದಿದ್ದು ಸಧ್ಯ ಕ್ವಾರಂಟೈನ್ ನಲ್ಲಿದ್ದು ಕೆಲಸ ಮುಂದುವರಿಸುವುದಾಗಿ ಹೇಳಿದ್ದಾರೆ ವಿಡಿಯೋ ಕಾನ್ಫರೆನ್ಸ್ ಮತ್ತು ದೂರವಾಣಿ ಮೂಲಕ ಎಲ್ಲಾ ಉಪ ಗವರ್ನರ್‌ಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.
"ನಾನು ಕೋವಿಡ್ 19 ಪಾಸಿಟಿವ್ ವರದಿ ಪಡೆದಿದ್ದೇನೆ. ಆದರೆ ಯಾವ ರೋಗಲಕ್ಷಣಗಳಿಲ್ಲ. . ಇತ್ತೀಚಿನ ದಿನಗಳಲ್ಲಿ ಸಂಪರ್ಕಕ್ಕೆ ಬಂದವರು ಎಚ್ಚರವಾಗಿರಿ. ಪ್ರತ್ಯೇಕತೆಯಿಂದ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ಸಂಸ್ಥೆಯಲ್ಲಿನ ಕೆಲಸ ಸಾಮಾನ್ಯ ದಿನಗಳಂತೆ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್ ಹಾಗೂ ದೂರವಾಣಿ ಮೂಲಕ ಸರ್ಕಾರ ಮತ್ತು ಇತರ ಅಧಿಕಾರಿಗಳೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ. " ದಾಸ್ ಹೇಳಿದ್ದಾರೆ.
ಮಾರ್ಚ್‌ನಲ್ಲಿ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಶಕ್ತಿಕಾಂತ ದಾಸ್ ಮತ್ತು ಇಡೀ ಸಿಬ್ಬಂದಿ ಕಚೇರಿಯಲ್ಲೇ ಕೆಲಸ ಮಾಡಿದ್ದಾರೆ.
Advertisement