ಕೋವಿಡ್-19 ಮೈಲಿಗಲ್ಲು: ದೇಶಾದ್ಯಂತ 71 ಲಕ್ಷ ಸೋಂಕಿತರು ಗುಣಮುಖ, ಚೇತರಿಕೆ ಪ್ರಮಾಣ ಶೇ.90ಕ್ಕೆ ಏರಿಕೆ!

ಕೋವಿಡ್-19 ನಿರ್ವಹಣೆಯಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ದೇಶದಲ್ಲಿನ ಒಟ್ಟಾರೆ ಸೋಂಕಿತರ ಪೈಕಿ ಬರೊಬ್ಬರಿ 71 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ.
ಕೊರೋನಾ ವೈರಸ್
ಕೊರೋನಾ ವೈರಸ್

ನವದೆಹಲಿ: ಕೋವಿಡ್-19 ನಿರ್ವಹಣೆಯಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ದೇಶದಲ್ಲಿನ ಒಟ್ಟಾರೆ ಸೋಂಕಿತರ ಪೈಕಿ ಬರೊಬ್ಬರಿ 71 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ.

ಈ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ದೇಶದಲ್ಲಿನ ಒಟ್ಟಾರೆ 79,09,960 ಸೋಂಕಿತರ ಪೈಕಿ ಈ ವರೆಗೂ 71,37,229 ಸೋಂಕಿತರು ಗುಣಮುಖರಾಗಿದ್ದಾರೆ. ಈ ಪೈಕಿ ನಿನ್ನೆ ಒಂದೇ ದಿನ 59,105 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಆ ಮೂಲಕ ದೇಶದ ಒಟ್ಟಾರೆ ಗುಣಮುಖರ ಪ್ರಮಾಣ ಶೇ.90ಕ್ಕೆ  ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,53,717 ರಷ್ಟಿದ್ದುದೆ.

ಇನ್ನು ದೇಶದಲ್ಲಿ ಭಾನುವಾರ 480 ಮಂದಿ ಕೋವಿಡ್-19 ಸೋಂಕಿತರು ಮೃತಪಟ್ಟಿದ್ದು, ಇದು 99 ದಿನಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ. ಇದು ದೇಶದ ಬಹುತೇಕ ಕಡೆಗಳಲ್ಲಿ ಸಾಂಕ್ರಾಮಿಕ ಇಳಿಮುಖವಾಗುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ. ಈ ಹಿಂದೆ ದಿನವೊಂದರಲ್ಲಿ ಕನಿಷ್ಠ ಸಾವು ಜುಲೈ 18ರಂದು ದಾಖಲಾಗಿತ್ತು. ಸಾವಿನ ಸಂಖ್ಯೆಯ ಈ ವಾರದ ದೈನಿಕ ಸರಾಸರಿ ಸೆಪ್ಟೆಂಬರ್ ಮಧ್ಯಕ್ಕೆ ಹೋಲಿಸಿದರೆ ಅರ್ಧದಷ್ಟಾಗಿದೆ. ಸೆಪ್ಟೆಂಬರ್ 15ರಂದು ದೇಶದಲ್ಲಿ ಇದುವರೆಗಿನ ಗರಿಷ್ಠ ಅಂದರೆ 1275 ಸಾವು ದಾಖಲಾಗಿತ್ತು. ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,19,014ಕ್ಕೆ ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com