ಮುಂಬೈ: ನಿಷೇಧ ಆದೇಶ ಉಲ್ಲಂಘಿಸಿದ ಬಿಜೆಪಿ ಮುಖಂಡೆ ಪಂಕಜಾ ಮುಂಡೆ ವಿರುದ್ಧ ಕೇಸ್ ದಾಖಲು

ನಿಷೇಧ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡೆ ಪಂಕಜಾ ಮುಂಡೆ ಮತ್ತಿತರ 40ರಿಂದ 50 ಮಂದಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ. 
ಪಂಕಜಾ ಮುಂಡೆ
ಪಂಕಜಾ ಮುಂಡೆ

ಔರಂಗಬಾದ್:  ನಿಷೇಧ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡೆ ಪಂಕಜಾ ಮುಂಡೆ ಮತ್ತಿತರ 40ರಿಂದ 50 ಮಂದಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ. 

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸಾವರ್ಗಾಂವ್ ನಲ್ಲಿ ಆಯೋಜಿಸಲಾಗಿದ್ದ ಪಂಕಜ್ ಮುಂಡೆ ರ್‍ಯಾಲಿಯಲ್ಲಿ ನಿಷೇಧ ಆದೇಶ ಉಲ್ಲಂಘಿಸಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಅಕ್ಚೋಬರ್ 25 ರಂದು ಸಾವರ್ಗಾಂವ್ ನಲ್ಲಿನ ಭಗವನ್ ಭಕ್ತಿ ಗಾಢ್ ಗೆ ಭೇಟಿ ನೀಡಿದ್ದ ಪಂಕಜ್ ಮುಂಡೆ,  ಆನ್ ಲೈನ್ ನಲ್ಲಿ  ದಸರಾ ರ್‍ಯಾಲಿಯನ್ನುದ್ದೇಶಿಸಿ ಭಾಷಣ ಮಾಡಿದ್ದರು. ಈ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಪಂಕಜ್ ಮುಂಡೆ, ರಾಜ್ಯ ಸಭಾ ಸದಸ್ಯ ಡಾ. ಭಾಗವತ್ ಕಾರಡ್, ಶಾಸಕರಾದ ಮೊನಿಕಾ ರಾಜಲೆ ಮತ್ತು ಮೇಘಾನ ಬರ್ಡಿಕರ್ ಮತ್ತಿತರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ನಿಷೇಧ ಆದೇಶ ಜಾರಿಯಲ್ಲಿದ್ದು, ಕೇವಲ 5 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಪಂಕಜಾ ಮುಂಡೆ ನಿಯಮ ಉಲ್ಲಂಘಿಸಿದ್ದು, ಐಪಿಸಿ ಸೆಕ್ಷನ್ 188 ಮತ್ತಿತರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಬೆಳವಣಿಗೆ ಕುರಿತಂತೆ ಸೋಮವಾರ ರಾತ್ರಿ ಟ್ವೀಟ್ ಮಾಡಿರುವ ಪಂಕಜಾ ಮುಂಡೆ, ಅಗತ್ಯ ಅನುಮತಿ ದೊರೆತ ನಂತರ ಭಗವನ್ ಬಾತಿ ಗಾಡ್ ಗೆ  ಭೇಟಿ ನೀಡಿದ್ದೆ. ಆದರೆ, ಈಗ ಕೇಸ್ ದಾಖಲಿಸಲಾಗಿದೆ. ಬಿಜೆಪಿ ಕಾರ್ಯಕರ್ತರ ನಂತರ ನನ್ನ ಮೇಲೆ ದೂರು ದಾಖಲಿಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು  ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com