ಅನ್ ಲಾಕ್ 5 ನವೆಂಬರ್ 30ರ ವರೆಗೆ ವಿಸ್ತರಣೆ, ಹೊಸ ಮಾರ್ಗಸೂಚಿ ಇಲ್ಲ: ಕೇಂದ್ರ

ಕೊರೋನಾ ನಿಯಂತ್ರಣ ಸಂಬಂಧ ಜಾರಿಗೊಳಿಸಿದ ನಿರ್ಬಂಧಗಳನ್ನು ಈಗಾಗಲೇ ಸಾಕಷ್ಟು ಸಡಿಲಗೊಳಿಸಲಾಗಿದ್ದು, ನವೆಂಬರ್ ತಿಂಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ನಿಯಂತ್ರಣ ಸಂಬಂಧ ಜಾರಿಗೊಳಿಸಿದ ನಿರ್ಬಂಧಗಳನ್ನು ಈಗಾಗಲೇ ಸಾಕಷ್ಟು ಸಡಿಲಗೊಳಿಸಲಾಗಿದ್ದು, ನವೆಂಬರ್ ತಿಂಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ಈಗ ಜಾರಿಯಲ್ಲಿರುವ ಅನ್'ಲಾಕ್ 5 ಅನ್ನು ನವೆಂಬರ್ 30ರ ವರೆಗೆ ವಿಸ್ತರಿಸಲಾಗಿದ್ದು, ಯಾವುದೇ ಹೊಸ ಮಾರ್ಗಸೂಚಿಯನ್ನು ಹೊರಡಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೊಸ ಆದೇಶದಲ್ಲಿ ತಿಳಿಸಿದೆ.

ದೇಶಾದ್ಯಂತ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಲಾಕ್ ಡೌನ್ ನವೆಂಬರ್ 30ರ ತನಕ ಮುಂದುವರೆಯಲಿದೆ. ಉಳಿದ ಪ್ರದೇಶಗಳಲ್ಲಿ ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಪ್ರಕಟಿಸಿದ ನಿಯಮಗಳು ಜಾರಿಯಲ್ಲಿರುತ್ತವೆ.

ಅನ್ ಲಾಕ್ 5 ಮಾರ್ಗಸೂಚಿಯಲ್ಲಿ ಚಿತ್ರ ಮಂದಿರ, ಈಜುಕೊಳ, ಕ್ರೀಡಾ ತರಬೇತಿ, ಮನೋರಂಜನಾ ಪಾರ್ಕ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಚಿತ್ರಮಂದಿರಲ್ಲಿ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ತಿಳಿಸಲಾಗಿತ್ತು. ಇದು ನವೆಂಬರ್ 30ರ ತನಕ ಮುಂದುವರೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com