• Tag results for unlock

ಅ.1 ರಿಂದ ಚಿತ್ರಮಂದಿರ, ಅ.3 ರಿಂದ ಶಾಲಾ ಕಾಲೇಜು ಮತ್ತು ಪಬ್ ಗಳಿಗೆ ಶೇಖಡ 100ರಷ್ಟು ಹಾಜರಾತಿಗೆ ಸರ್ಕಾರ ಒಪ್ಪಿಗೆ

ಅಕ್ಟೋಬರ್ 1 ರಿಂದ ಚಿತ್ರಮಂದಿರ. ಅಕ್ಟೋಬರ್ 3 ರಿಂದ ಶಾಲಾ-ಕಾಲೇಜು ಸೇರಿ ಪಬ್ ಗಳಿಗೂ ಶೇಕಡ ನೂರರಷ್ಟು ಹಾಜರಾತಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿ ಕೆಲವು ನಿಯಮಗಳನ್ನು ಸೂಚಿಸಿದೆ.

published on : 24th September 2021

ಕೋವಿಡ್-19 ಅನ್'ಲಾಕ್: ಜನರ ಬೇಜವಾಬ್ದಾರಿ; ನಗರದಲ್ಲಿ ನಿಯಮ ಉಲ್ಲಂಘಿಸುವವರ ಸಂಖ್ಯೆಯಲ್ಲಿ ಹೆಚ್ಚಳ!

ರಾಜ್ಯದಲ್ಲಿ ಅನ್'ಲಾಕ್ 2.0 ಹಾಗೂ ಅನ್ ಲಾಕ್ 3.0 ಆರಂಭವಾಗುತ್ತಿದ್ದಂತೆಯೇ ಜನರಲ್ಲಿ ಬೇಜವಾಬ್ದಾರಿತನ ಹೆಚ್ಚಾಗುತ್ತಿದ್ದು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೋನಾ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿದೆ. 

published on : 19th July 2021

ಅನ್ ಲಾಕ್ 4.O: ನಾಳೆಯಿಂದಲೇ ಥಿಯೇಟರ್ ಓಪನ್, ಜುಲೈ 26 ರಿಂದ ಪದವಿ ಕಾಲೇಜು ಪ್ರಾರಂಭ, ನೈಟ್​ ಕರ್ಫ್ಯೂ 1 ಗಂಟೆ ಸಡಿಲ

ರಾಜ್ಯದಲ್ಲಿ ಅನ್ ಲಾಕ್  4.O ಜಾರಿಗೆ ಮಾರ್ಗಸೂಚಿ ಆದೇಶ ಹೊರಬಂದಿದ್ದು ನಾಳೆಯಿಂದಲೇ ರಾಜ್ಯಾದ್ಯಂತ ಸಿನಿಮಾ ಥಿಯೇಟರ್ ಗಳು ಪ್ರೇಕ್ಷಕರಿಗೆ ತೆರೆಯಲಿದೆ.  ಅಲ್ಲದೆ ಜುಲೈ 26 ರಿಂದ ಪದವಿ ಕಾಲೇಜು ಪ್ರಾರಂಭಕ್ಕೆ ತೀರ್ಮಾನಿಸಲಾಗಿದೆ.

published on : 18th July 2021

ಲಾಕ್‏ಡೌನ್ ನಿಂದ ಕಂಗೆಟ್ಟಿದ್ದ ಜನರಿಗೆ ರಾಜ್ಯದ ಈ ನಿಸರ್ಗ ತಾಣಗಳೇ ಅಚ್ಚುಮೆಚ್ಚು!

ಹಂತಹಂತವಾಗಿ ಲಾಕ್ ಡೌನ್ ತೆರವುಗೊಳಿಸುತ್ತಿದ್ದರು ಅನೇಕರು ಇನ್ನು ವರ್ಕ್ ಫರ್ಮ್ ಹೋಂ ಆಯ್ಕೆಯನ್ನೇ ಮುಂದುವರೆಸುತ್ತಿರುವುದರಿಂದ ನೈಸರ್ಗಿಕ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದಾರೆ. ಅಲ್ಲದೆ ಮಾರ್ಗ ಮಧ್ಯೆ ಕೆಲಸ ಮಾಡುತ್ತಿರುವುದಾಗಿ ಕೆಲ ಪ್ರಕೃತಿ ಪ್ರಿಯರು ಹೇಳಿದ್ದಾರೆ. 

published on : 17th July 2021

ಅನ್ಲಾಕ್ 3.0 ಬಳಿಕ ಪ್ರವಾಸಿ ತಾಣಗಳತ್ತ ಪ್ರವಾಸಿಗರ ದಂಡು, ನಿಸರ್ಗದ ಮಡಿಲಲ್ಲಿ ಜನವೋ ಜನ!

ಕೋವಿಡ್-19 ಸಾಂಕ್ರಾಮಿಕದಿಂದಾಗಿ ಮುಚ್ಚಲ್ಪಟ್ಟಿದ್ದ ಪ್ರವಾಸಿತಾಣಗಳು ಇದೀಗ ಓಪನ್ ಆಗಿದ್ದು, ಆನ್ ಲಾಕ್ 3.0 ಬಳಿಕ ಪ್ರವಾಸಿತಾಣಗಳತ್ತ ಪ್ರವಾಸಿಗರ ಆಗಮನ ಜೋರಾಗಿದೆ. ಅದರಲ್ಲೂ ನೈಸರ್ಗಿಕ ತಾಣಗಳಿಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗಿದ್ದು, ಪ್ರಕೃತಿ ಸೌಂದರ್ಯ ಸವಿಯಲು ದಾಖಲೆ ಮಟ್ಟದಲ್ಲಿ ಪ್ರವಾಸಿಗರ ದಂಡು ಆಗಮಿಸುತ್ತಿದೆ. 

published on : 15th July 2021

ಅನ್'ಲಾಕ್ ಘೋಷಣೆಯಾದರೂ ಕೊಡಗು ಪ್ರವಾಸಿ ತಾಣಗಳು ಇನ್ನೂ ಕ್ಲೋಸ್: ಪ್ರವಾಸಿಗರಿಗೆ ನಿರಾಸೆ

ಕೊಡಗು ಜಿಲ್ಲೆಯಲ್ಲಿ ಅನ್'ಲಾಕ್ ಘೋಷಣೆಯಾಗಿ ಹಲವು ದಿನಗಳು ಕಳೆದರೂ ಪ್ರವಾಸಿ ತಾಣಗಳು ಮಾತ್ರ ಬಂದ್ ಆಗಿರುವುದು ಪ್ರವಾಸಿಗರಲ್ಲಿ ನಿರಾಸೆಯನ್ನುಂಟು ಮಾಡಿದೆ.

published on : 14th July 2021

ಅನ್ ಲಾಕ್ ನಡುವೆ ರಾಜ್ಯದಲ್ಲಿ ದಿನವೊಂದಕ್ಕೆ 1.6 ಲಕ್ಷ ಕೋವಿಡ್ ಟೆಸ್ಟ್, ಶೇ. 6.64 ಮಂದಿಗೆ ಲಸಿಕೆ

3ನೇ ಹಂತದ ಅನ್ ಲಾಕ್ ಜುಲೈ 5 ರಿಂದ ಪ್ರಾರಂಭವಾಗಿದ್ದು ಜನರು ಮನೆಯಿಂದ ಹೊರಬರಲು  ಪ್ರಾರಂಭಿಸಿದ್ದಾರೆ, ಆದರೆ ಕರ್ನಾಟಕದಲ್ಲಿ  ವ್ಯಾಕ್ಸಿನೇಷನ್ ಮತ್ತು ಕೋವಿಡ್ ಪರೀಕ್ಷೆ ಹೆಚ್ಚಳವಾಗಿಲ್ಲ.

published on : 12th July 2021

ಕಡೆಗೂ ಕೊಡಗು ಅನ್​ಲಾಕ್: ಸಹಜ ಸ್ಥಿತಿಯತ್ತ ಜನಜೀವನ

ಕೊಡಗು ಜಿಲ್ಲೆಯಲ್ಲೂ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಇಳಿಮುಖವಾಗುತ್ತಿದ್ದು ಶುಕ್ರವಾರದಿಂದ ಲಾಕ್‌ಡೌನ್‌ ಸಡಿಲಿಕೆಯಾಗಲಿದೆ. 

published on : 9th July 2021

ಅನ್ಲಾಕ್ 3.0 ಜಾರಿ: ರಾಜ್ಯದಲ್ಲಿ ಬಹುತೇಕ ಎಲ್ಲಾ ನಿರ್ಬಂಧಗಳೂ ತೆರವು; ಸಹಜ ಸ್ಥಿತಿಯತ್ತ ಕರ್ನಾಟಕ

ರಾಜ್ಯ ಸರ್ಕಾರ ಘೋಷಿಸಿರುವ ಅನ್'ಲಾಕ್ 3.0 ಸೋಮವಾರ ಜಾರಿಗೊಂಡಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯಗಳು, ಪ್ರವಾಸಿ ತಾಣಗಳು ಓಪನ್ ಆಗಿವೆ. ಮಾಲ್, ಕೈಗಾರಿಕೆ, ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿರುವ ಹಿನ್ನೆಲೆಯೆಲ್ಲಿ ವಾಣಿಜ್ಯ ಚಟುವಟಿಕೆಗಳು ಚುರುಕುಗೊಳ್ಳಲಿವೆ.

published on : 5th July 2021

ಅನ್ ಲಾಕ್ 3.0: ದೇವಾಲಯ, ಬಾರ್, ಮಾಲ್ ಓಪನ್; ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಅಂತ್ಯ- ಸಿಎಂ ಯಡಿಯೂರಪ್ಪ

ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಲ್ಲಿ ಅನ್ ಲಾಕ್ 3.0 ಮಾರ್ಗಸೂಚಿ ಪ್ರಕಟಿಸಿದೆ.

published on : 3rd July 2021

ರಾಜ್ಯದಲ್ಲಿ ಜುಲೈ 5ರ ನಂತರ ಅನ್ ಲಾಕ್ 3.0 ಜಾರಿ?: ಮುಖ್ಯಮಂತ್ರಿ ನೇತೃತ್ವದಲ್ಲಿ ಇಂದು ಸಭೆ

ಕೋವಿಡ್ 2ನೇ ಅಲೆಯ ಪ್ರಮಾಣ ತೀವ್ರ ಮಟ್ಟದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಳಿಕೆಯಾಗಿರುವುದರಿಂದ ಅನ್ ಲಾಕ್ 3.0 ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಲಿದ್ದು, ಈ ಬಗ್ಗೆ ಶನಿವಾರ ನಡೆಯುವ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಯಿದೆ.

published on : 3rd July 2021

ಡೆಲ್ಟಾ ಪ್ಲಸ್ ಉಲ್ಬಣ: ರಾಜ್ಯದಲ್ಲಿ ಅವಸರದ ಅನ್ ಲಾಕ್ ಬೇಡ-ಸರ್ಕಾರಕ್ಕೆ ಸಲಹಾ ಸಮಿತಿ ಸೂಚನೆ

ಕೋವಿಡ್ ಡೆಲ್ಟಾ-ಪ್ಲಸ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಮತ್ತು ಮಹಾರಾಷ್ಟ್ರ ಅನ್ ಲಾಕ್ ನಿಂದಾಗಿ ರಾಜ್ಯದಲ್ಲಿ ಮತ್ತೆನಿಧಾನವಾಗಿ ಪರಿಸ್ಥಿತಿ ಗಂಭೀರವಾಗುತ್ತಿದ್ದು ಈ ನಿಟ್ಟಿನಲ್ಲಿ ಕರ್ನಾಟಕದ ತಾಂತ್ರಿಕ ಸಲಹಾ ಸಮಿತಿ (ಟಿಎಸಿ)ರಾಜ್ಯ ಸರ್ಕಾರ ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲದೆ ಅವಸರದಲ್ಲಿ ಲಾಕ್ ಡೌನ್ ಮಾನದಂಡಗಳನ್ನು ಸಡಿಲಿಸುವು

published on : 27th June 2021

ಕೋವಿಡ್ ಅನ್ ಲಾಕ್: ದೆಹಲಿಯಲ್ಲಿ ನಾಳೆಯಿಂದ ಜಿಮ್ ಗಳು ಪುನರಾರಂಭ

 ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪ್ರಕರಣಗಳ ಇಳಿಕೆ ಮುಂದುವರೆದಿದ್ದು, ಮುಂದಿನ ವಾರಕ್ಕಾಗಿ ಹೊಸ ಸಡಿಲಿಕೆಗಳನ್ನು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಶನಿವಾರ ಪ್ರಕಟಿಸಿದೆ.

published on : 27th June 2021

ಅನ್ ಲಾಕ್ 2.0: ಸದ್ಯಕ್ಕಿಲ್ಲ ಜೈವಿಕ ಉದ್ಯಾನಗಳ ದರ್ಶನ, ಸ್ಥಳೀಯ ಆಡಳಿತ ಮಂಡಳಿಗೆ ಅಂತಿಮ ನಿರ್ಣಯದ ಜವಾಬ್ದಾರಿ

ಕೋವಿಡ್ ಲಾಕ್ ಡೌನ್ ನಿಂದಾಗಿ ಮುಚ್ಚಲ್ಪಟ್ಟಿದ್ದ ಜೈವಿಕ ಉದ್ಯಾನವನಗಳು ಮತ್ತು ಮೃಗಾಲಯಗಳನ್ನು ತೆರೆಯುವ ಕುರಿತು ಜಿಲ್ಲಾಡಳಿತ ಅಥವಾ ಮಹಾನಗರ ಪಾಲಿಕೆಗಳು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

published on : 22nd June 2021

ಕೊರೋನಾ ಇಳಿಮುಖ: ತೆಲಂಗಾಣ, ಆಂಧ್ರಪ್ರದೇಶಕ್ಕೆ ಕೆಎಸ್ಆರ್'ಟಿಸಿಯಿಂದ ಬಸ್ ಸೇವೆ ಆರಂಭ

ಕರ್ನಾಟಕದ ಕೆಲವೊಂದು ಜಿಲ್ಲೆಗಳು ಈಗಾಗಲೇ ಅನ್​ಲಾಕ್​ ಆಗಿದ್ದು, ಜನಜೀವನ ಈ ಹಿಂದಿನಂತೆ ಪುನಾರಂಭಗೊಳ್ಳುತ್ತಿದೆ. ಇದರ ಮಧ್ಯೆಯೇ ಕರ್ನಾಟಕ ಸರ್ಕಾರ ಅಂತಾರಾಜ್ಯ ಸಾರಿಗೆ ಮತ್ತೆ ಪುನಾರಂಭ ಮಾಡಲು ಮುಂದಾಗಿದ್ದು, ಅದರ ಪ್ರಥಮ ಹೆಜ್ಜೆಯಾಗಿ ಪಕ್ಕದ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶಕ್ಕೆ ಬಸ್​ ಸೇವೆ ಮರು ಆರಂಭ ಮಾಡಿದೆ.

published on : 22nd June 2021
1 2 3 > 

ರಾಶಿ ಭವಿಷ್ಯ