ಹಿಜ್ಬುಲ್ ಮುಖ್ಯಸ್ಥ ಸಲ್ಲಾಹುದ್ದೀನ್, ಭಟ್ಕಳದ ಸಹೋದರರು ಸೇರಿ 18 ಮಂದಿಯನ್ನು ಉಗ್ರರೆಂದು ಘೋಷಿಸಿದ ಮೋದಿ ಸರ್ಕಾರ

ಭಯೋತ್ಪಾದನೆ ವಿರೋಧಿ ಕಾನೂನಿನಡಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಮುಖ್ಯಸ್ಥ ಸೈಯದ್ ಸಲ್ಲಾಹುದ್ದೀನ್ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸ್ಥಾಪಕರಾದ ಭಟ್ಕಳ ಸಹೋದರರು ಸೇರಿದಂತೆ 18 ಮಂದಿಯನ್ನು ಉಗ್ರರೆಂದು ಘೋಷಿಸಲಾಗಿದೆ ಎಂದು ಅಧಿಕೃತ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.
ಸೈಯದ್ ಸಲ್ಲಾಹುದ್ದೀನ್
ಸೈಯದ್ ಸಲ್ಲಾಹುದ್ದೀನ್

ನವದೆಹಲಿ: ಭಯೋತ್ಪಾದನೆ ವಿರೋಧಿ ಕಾನೂನಿನಡಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಮುಖ್ಯಸ್ಥ ಸೈಯದ್ ಸಲ್ಲಾಹುದ್ದೀನ್ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸ್ಥಾಪಕರಾದ ಭಟ್ಕಳ ಸಹೋದರರು ಸೇರಿದಂತೆ 18 ಮಂದಿಯನ್ನು ಉಗ್ರರೆಂದು ಘೋಷಿಸಲಾಗಿದೆ ಎಂದು ಅಧಿಕೃತ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.

199ರಲ್ಲಿ ನಡೆದಿದ್ದ ಇಂಡಿಯನ್ ಏರ್ ಲೈನ್ಸ್ ಅಪಹರಣಕಾರರಾದ ಅಬ್ದುಲ್ ರವೂಫ್ ಅಸ್ಗಾರ್, ಇಬ್ರಾಹಿಂ ಅಥರ್ ಮತ್ತು ಯೂಸಫ್ ಅಜಾರ್ ಕೂಡಾ ಈ ಪಟ್ಟಿಯಲ್ಲಿದ್ದಾರೆ. 

ಮುಂಚೆ ಉಗ್ರ ಸಂಘಟನೆಗಳನ್ನು ಮಾತ್ರ ಕಠಿಣ ಕಾನೂನಿನಡಿ ಸೇರಿಸಲಾಗುತಿತ್ತು. ವ್ಯಕ್ತಿಗಳನ್ನು ಸೇರಿಸುತ್ತಿರಲಿಲ್ಲ. ಆದರೆ, ಕಳೆದ ವರ್ಷ ಆಗಸ್ಟ್ ನಲ್ಲಿ ಸಂಸತ್ ಉಗ್ರ ವಿರೋಧಿ ಕಾಯ್ದೆಗೆ ತಿದ್ದುಪಡಿ ತಂದು, ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಥವಾ ಪೋತ್ಸಾಹ, ಉತ್ತೇಜಿನ ರೀತಿಯ ಚಟುವಟಿಕೆಗಳಲ್ಲಿ ನಡೆಸುವವರನ್ನು ಉಗ್ರರೆಂದು ಘೋಷಿಸಲು ವಿನಾಯಿತಿ ನೀಡಲಾಗಿದೆ.

ಈ ತಿದ್ದುಪಡಿ  ನಂತರ ಕೇಂದ್ರ ಸರ್ಕಾರ  2019 ರ ಸೆಪ್ಟೆಂಬರ್‌ನಲ್ಲಿ ನಾಲ್ಕು ವ್ಯಕ್ತಿಗಳನ್ನು ಮತ್ತು 2020 ರ ಜುಲೈನಲ್ಲಿ ಒಂಬತ್ತು ಜನರನ್ನು ಭಯೋತ್ಪಾದಕರಾಗಿ ಘೋಷಿಸಿದೆ. ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಬದ್ಧತೆ ಮೂಲಕ ಮೋದಿ ಸರ್ಕಾರ ಇಂದು ಭಯೋತ್ಪಾದಕ ವಿರೋಧಿ ಕಾನೂನಿನ ನಿಬಂಧನೆಗಳ ಪ್ರಕಾರ ಇನ್ನೂ 18 ಜನರನ್ನು  ಭಯೋತ್ಪಾದಕರಾಗಿ ಘೋಷಿಸಿದೆ" ಎಂದು ವಕ್ತಾರರು ತಿಳಿಸಿದ್ದಾರೆ.

ಇವರು  ಗಡಿಯುದ್ದಕ್ಕೂ ವಿವಿಧ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ. 

ಘೋಘಿಸಲಾಗಿರುವ ಉಗ್ರರ ಪೈಕಿ ಸಜ್ಜಿದ್ ಮಿರ್, ಪಾಕಿಸ್ತಾನ ಮೂಲದ ಎಲ್ ಇಟಿ ಕಮಾಂಡರ್ ಆಗಿದ್ದು, ಮುಂಬೈ ದಾಳಿಯ ಪ್ರಮುಖ ಸಂಚುಕೋರನಾಗಿದ್ದಾನೆ. ಯುಸಫ್ ಮುಜಾಮಿಲ್ ಕೂಡಾ ಎಲ್ ಇಟಿ ಕಮಾಂಡ್ ಮತ್ತು ಮುಂಬೈ ದಾಳಿಯ ಆರೋಪಿಯಾಗಿದ್ದಾನೆ. ಅಬ್ದುಲ್ ರೆಹಮಾನ್ ಮಕ್ಕಿ, ಲಷ್ಕರ್ ಮುಖ್ಯಸ್ಥ ಹಪೀಜ್ ಸೈಯದ್ ಅಳಿಯನಾಗಿದ್ದು, ಸಂಘಟನೆಯ ವಿದೇಶಿ ಸಂಬಂಧಿತ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com