ಮುಂಬೈ ಮೆಟ್ರೋ ಪಿಲ್ಲರ್ ಗೆ ಕ್ರೇನ್ ಡಿಕ್ಕಿ: ಓರ್ವ ಮಹಿಳೆ ಸಾವು; ಇಬ್ಬರಿಗೆ ಗಾಯ!
ದೇಶ
ಮುಂಬೈ ಮೆಟ್ರೋ ಪಿಲ್ಲರ್ ಗೆ ಕ್ರೇನ್ ಡಿಕ್ಕಿ: ಓರ್ವ ಮಹಿಳೆ ಸಾವು; ಇಬ್ಬರಿಗೆ ಗಾಯ!
ಮುಂಬೈ ಮೆಟ್ರೋ ಪಿಲ್ಲರ್ ಗೆ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದರೆ, ಇಬ್ಬರಿಗೆ ಗಾಯಗಳಾಗಿವೆ.
ಮುಂಬೈ: ಮುಂಬೈ ಮೆಟ್ರೋ ಪಿಲ್ಲರ್ ಗೆ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದರೆ, ಇಬ್ಬರಿಗೆ ಗಾಯಗಳಾಗಿವೆ.
ಶನಿವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಜೊಗೇಶ್ವರಿಯಿಂದ ಬಾಂದ್ರಾಗೆ ತೆರಳುತ್ತಿದ್ದ ಮೆಟ್ರೋ ಕ್ರೇನ್ ನಿಯಂತ್ರಣ ತಪ್ಪಿ ಅಂಧೇರಿ ಗುಂದಾವಲಿ ಬಳಿ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕ್ರೇನ್ ಎರಡು ತುಂಡಾಗಿದ್ದು, ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆ ಕ್ರೇನ್ ನ ಹಿಂಬದಿಯ ಚಕ್ರಗಳ ಅಡಿಯಲ್ಲಿ ಸಿಲುಕಿದ್ದು ಸಾವನ್ನಪ್ಪಿದ್ದಾರೆ, ಹತ್ತಿರದಲ್ಲೇ ಇದ್ದ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ರೇನ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ