ಅಮ್ನೇಶಿಯಾದಿಂದ ಬಳಲುತ್ತಿದ್ದ ತೆಲಂಗಾಣ ವ್ಯಕ್ತಿ 16 ವರ್ಷಗಳ ನಂತರ ಮರಳಿ ಮನೆಗೆ!

ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ತೆಲಂಗಾಣ ಮೂಲದ ವ್ಯಕ್ತಿ 16 ವರ್ಷಗಳಿಂದ ಗಲ್ಫ್ ರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದರು, ಅಂತಿಮವಾಗಿ 16 ವರ್ಷದ ನಂತರ ತಾಯ್ನಾಡಿಗೆ ಮರಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ತೆಲಂಗಾಣ: ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ತೆಲಂಗಾಣ ಮೂಲದ ವ್ಯಕ್ತಿ 16 ವರ್ಷಗಳಿಂದ ಗಲ್ಫ್ ರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದರು, ಅಂತಿಮವಾಗಿ 16 ವರ್ಷದ ನಂತರ ತಾಯ್ನಾಡಿಗೆ ಮರಳಿದ್ದಾರೆ.

ಯುಎಇ ಸರ್ಕಾರ ಅಮ್ನೆಸ್ಟಿ ಯೋಜನೆಯಡಿ 29 ಲಕ್ಷ ದಂಡವನ್ನು ಮನ್ನಾ ಮಾಡಿದೆ.  ಕಾಮರೆಡ್ಡಿ ಜಿಲ್ಲೆಯ ದಾಮಕೊಂಡ ಮಂಡಲದ ಚಿಂತಾಮನಪಳ್ಳಿ ಗ್ರಾಮದ ಯಲ್ಲಯ್ಯ 2004 ರಲ್ಲಿ ಯುಎಇ  ಗೆ ತೆರಳಿದ್ದರು. ಅಲ್ಲಿ ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.

ಕಂಪನಿಯೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೆಲಸ ಬಿಟ್ಟ ಆತ ಕಳೆದ 16 ವರ್ಷಗಳಿಂದ ದುಬೈ ಮತ್ತು ಶಾರ್ಜಾದಲ್ಲಿ ವಾಸಿಸುತ್ತಿದ್ದ. ವಾಪಸ್ ಭಾರತಕ್ಕೆ ಬರಲು ಪಾಸ್ ಪೋರ್ಟ್ ಇಲ್ಲದ ಕಾರಣ ಅಲ್ಲಿಯೇ ಸಿಲುಕಿದ್ದರು.

ಆತನ ಪತ್ನಿ ನೀಲಾ ರಾಜವ್ವ ಅವರ ಮನವಿ ಮೇರೆಗೆ ಹೈದರಾಬಾದ್ ಪಾಸ್ ಪೋರ್ಟ್ ಕಚೇರಿ 2004 ರ ಪಾಸ್ ಪೋರ್ಟ್ ವಿವರಗಳನ್ನು ಪರಿಶೀಲಿಸಿದಾಗ ಮಾಹಿತಿ ಸಿಕ್ಕಿದೆ.

ಈ ಮಾಹಿತಿಯನ್ನು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ನೀಡಲಾಯಿತು, ಈ ಮಾಹಿತಿ ಆಧರಿಸಿ ಭಾರತೀಯ ರಾಯಭಾರ ಕಚೇರಿ, ದುಬೈ ನಿಂದ ಹೈದರಾಬಾದ್ ಗೆ ಏರ್ ಟಿಕೆಟ್ ನೀಡಿತು.

ಸುದೀರ್ಘ ಸಮಯದ ನಂತರ ಸೋಮವಾರ ರಾತ್ರಿ ದುಬೈ ನಿಂದ ಹೈದರಾಬಾದ್ ಗೆ ಬಂದಿಳಿದಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ವಂದೇ ಭಾರತ್ ಮಿಷನ್ (ವಿಬಿಎಂ) ಕರ್ತವ್ಯದಲ್ಲಿದ್ದ ಎನ್‌ಆರ್‌ಐ ಇಲಾಖೆ ಅಧಿಕಾರಿ ಇ.ಚಿಟ್ಟಿಬಾಬು ಅವರು, ಯಲ್ಲಯ್ಯ ಅವರ ದೈಹಿಕ ದೌರ್ಬಲ್ಯ ಮತ್ತು ಜ್ಞಾಪಕ ಶಕ್ತಿ ನಷ್ಟವನ್ನು ಪರಿಗಣಿಸಿ ಅವರ ಕುಟುಂಬ ಸದಸ್ಯರ ಕೋರಿಕೆಯ ಮೇರೆಗೆ ಹೋಮ್ ಕ್ವಾರಂಟೈನ್ ಗೆ ಅನುಮತಿ ನೀಡಿದ್ದಾರೆ.

ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರೋಟೋಕಾಲ್ ಸಿಬ್ಬಂದಿ ಯೆಲ್ಲಾಯಾಗೆ ವಲಸೆ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ವಿಶೇಷ ಕಾಳಜಿ ವಹಿಸಿ ಅವರನ್ನು ಹೊರಗೆ ಕರೆತಂದು ಮಧ್ಯರಾತ್ರಿಯ ನಂತರ ಅವರ ಸಂಬಂಧಿಕರಿಗೆ ಒಪ್ಪಿಸಿದರು. ಮಂಗಳವಾರ ಬೆಳಿಗ್ಗೆ ಯಲ್ಲಯ್ಯ ತಮ್ಮ ಸ್ವಗ್ರಾಮ ತಲುಪಿದ್ದಾರೆ.

ಭೀಮ್ ರೆಡ್ಡಿ ಮಂದಾ ಎಂಬ ಕಾರ್ಯಕರ್ತ ಯೆಲ್ಲಾಯ್ಯಾ ಅವರಿಗೆ ಪುನರ್ವಸತಿ ಕಲ್ಪಿಸುವಂತೆ ರಾಜ್ಯ ಮತ್ತು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com