ಕೊರೋನ ಬಿಕ್ಕಟ್ಟು, ವಿದೇಶಿ ವಿದ್ಯಾರ್ಥಿಗಳ ಹಿತ ರಕ್ಷಣೆಗೆ ಸರ್ಕಾರ ಬದ್ಧ: ವಿದೇಶಾಂಗ ಸಚಿವ ಎಸ್ ಜೈಶಂಕರ್

ಕೋವಿಡ್ -19 ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸಬೇಕೆಂದು ಜಾಗತಿಕ ಸಮುದಾಯಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಮನವಿ ಮಾಡಿದ್ದಾರೆ.
ಜೈಶಂಕರ್
ಜೈಶಂಕರ್

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸಬೇಕೆಂದು ಜಾಗತಿಕ ಸಮುದಾಯಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಮನವಿ ಮಾಡಿದ್ದಾರೆ.

ಜಿ- 20 ವಿದೇಶಾಂಗ ಮಂತ್ರಿಗಳ ವರ್ಚುವಲ್ ಸಭೆಯಲ್ಲಿ ಅವರು ಮಾತನಾಡಿದರು.ಅದೆ ರೀತಿ ನಾಗರಿಕರನ್ನು ಅವರ ತಾಯಿನಾಡಿಗೆ ಕಳುಹಿಸಲು ಸಹ ಕ್ರಮ ಕೈಗೊಳ್ಳಬೇಕು ಎಂದರು. ಈ ಸಭೆಯನ್ನು ಸೌದಿ ಅರೇಬಿಯಾ ಏರ್ಪಡಿಸಿದೆ. ಸೌದಿ ಅರೇಬಿಯಾ ಸಾಮ್ರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವ  ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಅಲ್-ಸೌದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕೋವಿಡ್ -19 ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ವಾಸ್ತವ ಸಭೆಯನ್ನು ಕರೆಯಲಾಯಿತು.ಕೋವಿಡ್ -19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಗಡಿಯುದ್ದಕ್ಕೂ ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಬಗ್ಗೆ ಚರ್ಚೆಗಳು ಕೇಂದ್ರೀಕೃತವಾಗಿದ್ದು ಗಡಿಯಾಚೆಗಿನ ನಿರ್ವಹಣಾ ಕ್ರಮಗಳಿಂದ ಕಲಿತ ಅನುಭವಗಳು ಮತ್ತು  ಪಾಠಗಳನ್ನು ಸಚಿವರು ವಿನಿಮಯ ಮಾಡಿಕೊಂಡರು. ವಂದೇ ಭಾರತ್ ಮಿಷನ್ ಸೇರಿದಂತೆ ಭಾರತ ವಿದೇಶಿ ನಾಗರಿಕರ ರಕ್ಷಣೆಗೆ ಕೈಗೊಂಡ ಕ್ರಮಗಳನ್ನು ಜಿ 20 ವಿದೇಶಾಂಗ ಸಚಿವರ ಸಭೆಗೆ ಶಂಕರ್ ವಿವರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com