ಜಮ್ಮು: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಮೂರು ವಲಯಗಳಲ್ಲಿ ಪಾಕಿಸ್ತಾನ ಸೇನಾಪಡೆ ಶನಿವಾರ ಬೆಳಗಿನಿಂದ ತೀವ್ರ ಗುಂಡಿನ ದಾಳಿಯಲ್ಲಿ ತೊಡಗಿ ಕದನ ವಿರಾಮ ಉಲ್ಲಂಘಿಸಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಪೂಂಚ್ ಜಿಲ್ಲೆಯ ಶಹ್ ಪುರ್, ಕಿರ್ನಿ ಮತ್ತು ದೆಗ್ವಾರ್ ವಲಯಗಳಲ್ಲಿ ಗುಂಡಿನ ಮತ್ತು ಶೂಟಿಂಗ್ ದಾಳಿ ಇಂದು ಬೆಳಗ್ಗೆ 9.15ರ ಹೊತ್ತಿಗೆ ಆರಂಭವಾಯಿತು. ಇದಕ್ಕೆ ನಮ್ಮ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಯಾವುದೇ ಸಾವು, ನೋವು ಆದ ವರದಿಯಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
Advertisement