2021ರ ಆರಂಭದಲ್ಲಿ ಚಂದ್ರಯಾನ-3 ಉಡಾವಣೆ: ಚಂದ್ರಯಾನ–2’ರಂತೆ ಈ ಬಾರಿ ಆರ್ಬಿಟರ್ ಇರುವುದಿಲ್ಲ

ಭಾರತದ ಮಹತ್ವದ ಚಂದ್ರಯಾನ-3 ಯೋಜನೆ 2021 ಆರಂಭದಲ್ಲಿ ನಡೆಯಲಿದೆ ಎಂದು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಭಾರತದ ಮಹತ್ವದ ಚಂದ್ರಯಾನ-3 ಯೋಜನೆ 2021 ಆರಂಭದಲ್ಲಿ ನಡೆಯಲಿದೆ ಎಂದು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದ್ದಾರೆ. 

ಕೊರೋನಾ ವೈರಸ್ ಕಾರಣದಿಂದಾಗಿ ಈ ವರ್ಷ ಅಂತ್ಯದಲ್ಲಿ ಉಡಾವಣೆಯಾಗಬೇಕಿದ್ದ ಚಂದ್ರಯಾನ-3 ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. 2021ರ ಆರಂಭದಲ್ಲಿ ಚಂದ್ರಯಾನ-3 ನೌಕೆ ಚಂದ್ರನತ್ತ ಹಾರಲಿದೆ ಎಂದು ಹೇಳಿದ್ದಾರೆ. 

2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಚಂದ್ರಯಾನ-2 ಯೋಜನೆ ಸಾಕಾರಗೊಂಡಿತ್ತಾದರೂ, ಅದರ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ ವರ್ಷದ ಅಂತ್ಯದ ವೇಳೆಗೆ ಚಂದ್ರಯಾನ-3 ಉಪಗ್ರಹ ಉಡಾವಣೆ ಮಾಡುವ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಾಹಿತಿ ನೀಡಿತ್ತು.

ಇದರಂತೆ 2021ರ ಆರಂಭದಲ್ಲಿ ಯೋಜನೆ ಸಕಾರಗೊಳ್ಳಲಿದೆ. ಆದರೆ. ಈ ಬಾರಿ ಚಂದ್ರಯಾನ–2’ರಂತೆ ಆರ್ಬಿಟರ್ ಇರುವುದಿಲ್ಲ. ಆರ್ಬಿಟರ್ ರಹಿತ, ಲ್ಯಾಂಡರ್ ಮತ್ತು ರೋವರ್‌ಗಳ ಸಹಿತ ಚಂದ್ರಯಾನ-3 ಯೋಜನೆ ಸಾಕಾರಗೊಳ್ಳಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 

ಇಸ್ರೋದ ಮೊದಲ ಚಂದ್ರಯಾನ ಯೋಜನೆ ಶಶಿಯ ಅಂಗಳದಲ್ಲಿ ನೀರಿನ ಅಂಶವಿರುವುದನ್ನು ಪತ್ತೆಹಚ್ಚಿತ್ತು. ಅದಲ್ಲದೆ ಚಂದ್ರನ ಧ್ರುವಗಳ ಉದ್ದಕ್ಕೂ ತುಕ್ಕು ಹಿಡಿಯಬಹುದೆಂದು ಸೂಚಿಸುವ ಚಿತ್ರಗಳನ್ನು ಭೂಮಿಗೆ ಕಳುಹಿಸಿತ್ತು.ಇದೀಗ ಭಾರತದ ಚಂದ್ರಯಾನ-3 ಯೋಜನೆ ಬಗ್ಗೆ ಜಗತ್ತಿನ ಹಲವು ವಿಜ್ಞಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. 

ಭಾರತದ ಮೊತ್ತಮೊದಲ ಮಾನವ ಸಹಿತ ಗಗನಯಾನ ಯೋಜನೆಗೆ ತಯಾರಿ ಜೋರಾಗಿ ನಡೆಯುತ್ತಿದೆ. ಇದರ ಗಗನಯಾತ್ರಿಗಳ ತರಬೇತಿ ಕಾರ್ಯಗಳು ಚಾಲನೆಯಲ್ಲಿವೆ. ಕೋವಿಡ್ ಕಾರಣದಿಂದ ತುಸು ಹಿನ್ನಡೆಯಾದರೂ 2022ರ ಆಸುಪಾಸಿನ ವೇಳೆಗೆ ಮಾನವಸಹಿತ ಗಗನಯಾನ ಲಾಂಚ್ ಆಗುವ ನಿರೀಕ್ಷೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com