ಬಿಹಾರ ಚುನಾವಣೆಗೆ ಮುನ್ನ ಆರ್‌ಜೆಡಿಗೆ ಶಾಕ್! ಹಿರಿಯ ನಾಯಕ ರಘುವಂಶ್ ಪ್ರಸಾದ್ ರಾಜೀನಾಮೆ

ಬಿಹಾರ ಚುನಾವಣೆಗೆ ಮುನ್ನ ರಾಷ್ಟ್ರೀಯ ಜನತಾದಳಕ್ಕೆ (ಆರ್‌ಜೆಡಿ) ದೊಡ್ಡ ಹಿನ್ನಡೆಯಾಗಿದೆ. ಪಕ್ಷದ ಹಿರಿಯ ನಾಯಕರಾದ ರಘುವಂಶ್ ಪ್ರಸಾದ್ ಸಿಂಗ್ ಗುರುವಾರ  ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಪ್ರಸ್ತುತ ರಾಂಚಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಘುವಂಶ್ ಪ್ರಸಾದ್ ಸಿಂಗ್
ರಘುವಂಶ್ ಪ್ರಸಾದ್ ಸಿಂಗ್

ಪಾಟ್ನಾ: ಬಿಹಾರ ಚುನಾವಣೆಗೆ ಮುನ್ನ ರಾಷ್ಟ್ರೀಯ ಜನತಾದಳಕ್ಕೆ (ಆರ್‌ಜೆಡಿ) ದೊಡ್ಡ ಹಿನ್ನಡೆಯಾಗಿದೆ. ಪಕ್ಷದ ಹಿರಿಯ ನಾಯಕರಾದ ರಘುವಂಶ್ ಪ್ರಸಾದ್ ಸಿಂಗ್ ಗುರುವಾರ  ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಪ್ರಸ್ತುತ ರಾಂಚಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಸಾದ್ ಅವರು ಈ ವರ್ಷದ ಜೂನ್‌ನಲ್ಲಿ ತಮ್ಮ ಆರ್‌ಜೆಡಿಯ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಆದಾಗ್ಯೂ, ಆಗಸ್ಟ್ ನಲ್ಲಿ  ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಾಲು ಪ್ರಸಾದ್ ಅವರಿಂದ ಸಂದೇಶ ಬಂದ ನಂತರ ಅವರು ಮತ್ತೆ ಪಕ್ಷದಲ್ಲಿ ಉಳಿಯಬಹುದು ಎಂಬ ಊಹಾಪೋಹಗಳಿದ್ದವು. ರಜಪೂತ್ ಮನೆತನದ ಹಿನ್ನೆಲೆ ಇರುವ  ಹಿರಿಯ ಆರ್‌ಜೆಡಿ ಮುಖಂಡ ರಘುವಂಶ್ ಪ್ರಸಾದ್ ತಮ್ಮ ಸಾಂಪ್ರದಾಯಿಕ ನು ಪ್ರತಿಸ್ಪರ್ಧಿ, ಮಾಜಿ ಸಂಸದ ರಾಮಕಿಶೋರ್ ಸಿಂಗ್ ಅವರು ಆರ್‌ಜೆಡಿಗೆ ಸೇರಲು ಮಾಡಿದ ಪ್ರಯತ್ನಗಳಿಂದ ಅಸಮಾಧಾನಗೊಂಡಿದ್ದಾ

ಎಲ್ಜೆಪಿಯಿಂದ ಸ್ಪರ್ಧಿಸಿ, ರಾಮಕಿಶೋರ್ ಅವರು 2014 ರಲ್ಲಿ ವೈಶಾಲಿ ಲೋಕಸಭಾ ಸ್ಥಾನದಿಂದ ರಘುವಂಶ್  ಅವರನ್ನು ಸೋಲಿಸಿದ್ದರು. 2019 ರಲ್ಲಿ ಜೆಡಿಯುನ ವೀಣಾ ಸಿಂಗ್ ಅವರು ಆರ್ಜೆಡಿ ನಾಯಕರ ವಿರುದ್ಧ ಗೆಲುವು ಸಾಧಿಸಿದ್ದರು.

ರಾಮಕಿಶೋರ್ ಅವರು ಪಕ್ಷಕ್ಕೆ ಸೇರಲು ಆಗದೆ ಹತಾಶರಾದವರಂತೆ ಕಾಣುತ್ತಿದ್ದಾರೆ. ಅವರು ಈ ಹಿಂದೆ ಪ್ರತಿಪಕ್ಷದ ನಾಯಕ ತೇಜಶ್ವಿ ಯಾದವ್ ಅವರನ್ನು ಭೇಟಿ ಮಾಡಿದ್ದರು. ಇದನ್ನು ವಿರೋಧಿಸಿದ್ದ ರಘುವಂಶ್  ಜೂನ್ 23 ರಂದು ಪಕ್ಷದ ಹುದ್ದೆಯಿಂದ ಕೆಳಗಿಳಿದಿದ್ದರು.

ಮೇಲ್ಜಾತಿಯ ರಜಪೂತ ನಾಯಕರಾದ ರಘುವಂಶ್  ಮತ್ತು ರಾಮಕಿಶೋರ್ ಇಬ್ಬರೂ ವೈಶಾಲಿಯಲ್ಲಿ ಠಾಕೂರ್ ಮತಗಳನ್ನು ಸೆಳೆಯುವ ಪ್ರಮುಖ ನಾಯಕರಾಗಿದ್ದಾರೆ. ಇಡಬ್ಲ್ಯೂಎಸ್ ಕೋಟಾವನ್ನು ಟೀಕಿಸಿದ್ದಕ್ಕಾಗಿ ಆರ್ಜೆಡಿಯನ್ನು ಬಲವಾಗಿ ವಿರೋಧಿಸದ ಕಾರಣ ರಜಪೂತರಲ್ಲಿ ಒಂದುಪಂಗಡವು ರಘುವಂಶ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ, ರಾಮಕಿಶೋರ್ ತಮ್ಮ ರಾಜಕೀಯ ಪ್ರತಿಸ್ಪರ್ಧಿಯನ್ನು ಮಣಿಸಲು ಪ್ರಯತ್ನಿಸುತ್ತಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com