ಬಾಳಾ ಸಾಬ್ ಠಾಕ್ರೆಗೆ ಶಿವಸೇನೆ ಕಾಂಗ್ರೆಸ್ ಆಗಿ ಪರಿವರ್ತನೆಯಾಗುವ ಭೀತಿ ಇತ್ತು... ಆದರೆ ಅದು ಇಂದು ನಿಜವಾಗಿದೆ: ಕಂಗನಾ ರಣಾವತ್

ತಮ್ಮ ಪಕ್ಷದ ಇಂದಿನ ಪರಿಸ್ಥಿತಿಯನ್ನು ಬಾಳ ಸಾಹೇಬ್ ಠಾಕ್ರೆಯವರು ನೋಡಿದ್ದರೆ, ಅವರ ಮನಸ್ಸು ಏನಾಗುತ್ತಿತ್ತು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಶುಕ್ರವಾರ ಪ್ರಶ್ನಿಸಿದ್ದಾರೆ. 
ನಟಿ ಕಂಗನಾ
ನಟಿ ಕಂಗನಾ
Updated on

ಮುಂಬೈ: ತಮ್ಮ ಪಕ್ಷದ ಇಂದಿನ ಪರಿಸ್ಥಿತಿಯನ್ನು ಬಾಳ ಸಾಹೇಬ್ ಠಾಕ್ರೆಯವರು ನೋಡಿದ್ದರೆ, ಅವರ ಮನಸ್ಸು ಏನಾಗುತ್ತಿತ್ತು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಶುಕ್ರವಾರ ಪ್ರಶ್ನಿಸಿದ್ದಾರೆ. 

ಸಾಮಾಜಿಕ ಜಾಲತಾಣ್ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಂಗನಾ ಅವರು, ಬಾಳಸಾಹೇಬ್ ಠಾಕ್ರೆಯವರ ಸಂದರ್ಶನದ ವಿಡಿಯೋವೊಂದನ್ನು ಹಂಚಿಕೊಂಡು, ಬಾಳಾ ಸಾಬ್ ಠಾಕ್ರೆಗೆ ಶಿವಸೇನೆ ಕಾಂಗ್ರೆಸ್ ಆಗಿ ಪರಿವರ್ತನೆಯಾಗುವ ಭೀತಿ ಇತ್ತು ಎಂದು ಹೇಳಿದ್ದಾರೆ. 

ನಾನು ಇಷ್ಟ ಪಡುವ ಸಾಕಷ್ಟು ಅತ್ಯುತ್ತಮ ವ್ಯಕ್ತಿಗಳಲ್ಲಿ ಬಾಳ ಸಾಹೇಬ್ ಠಾಕ್ರೆ ಕೂಡ ಒಬ್ಬರಾಗಿದ್ದಾರೆ. ಮುಂದೊಂದು ದಿನ ಶಿವಸೇನೆ ಮಹಾಘಟ್ ಬಂಧನಕ್ಕೊಳಗಾಗಿ ಕಾಂಗ್ರೆಸ್ ಆಗಿಬಿಟ್ಟರೆ ಎಂಬ ದೊಡ್ಡ ಭಯ ಬಾಳ ಸಾಹೇಬ್ ಟಾಕ್ರೆಯವರಿತ್ತು. ಇಂದಿನ ಪಕ್ಷದ ಪರಿಸ್ಥಿತಿಯನ್ನು ನೋಡಿದಿದ್ದರೆ ಅವರ ಮನಸ್ಸು ಎನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com