ಶಿಕ್ಷಣ ಸಂಸ್ಥೆಗಳ ಸಂಸ್ಕೃತಿಯಲ್ಲಿ ಉತ್ಕೃಷ್ಟತೆಯ ಅನ್ವೇಷಣೆ ಬೇರೂರಿರಬೇಕು: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಉತ್ಕೃಷ್ಟತೆಯ ಅನ್ವೇಷಣೆ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರಬೇಕು ಮತ್ತು ಅದನ್ನು ಶಿಕ್ಷಣ ಸಂಸ್ಥೆಗಳ ಸಂಸ್ಕೃತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
Updated on

ನವದೆಹಲಿ: ಉತ್ಕೃಷ್ಟತೆಯ ಅನ್ವೇಷಣೆ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರಬೇಕು ಮತ್ತು ಅದನ್ನು ಶಿಕ್ಷಣ ಸಂಸ್ಥೆಗಳ ಸಂಸ್ಕೃತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ.

ರಾಮಕೃಷ್ಣ ಮಠದ ಹೈದರಾಬಾದ್‌ನ ವಿವೇಕಾನಂದ ಮಾನವ ಶ್ರೇಷ್ಠತಾ ಸಂಸ್ಥೆ (ವಿಐಎಚ್‍ಇ)ಯ 21ನೇ ಸ್ಥಾಪನಾ ದಿನಾಚರಣೆಯ ವರ್ಚ್ಯುವಲ್‍ ಸಭೆಯಲ್ಲಿ ಪಾಲ್ಗ್ಗೊಂಡು ಭಾಷಣ ಮಾಡಿದ ಅವರು, 'ಒಂದು ರಾಷ್ಟ್ರವಾಗಿ ನಮ್ಮ ಪ್ರಯಣದ ಈ ಮಹತ್ವದ ಹಂತದಲ್ಲಿ, ಉತ್ಕೃಷ್ಟತೆ ಅಗತ್ಯವಾಗಿದೆ. ಸಾಧಾರಣವಾಗಿ  ಮುಂದುವರೆಯುವುದು ಇನ್ನು ಮುಂದೆ ಒಂದು ಆಯ್ಕೆಯಾಗುವುದಿಲ್ಲ. ಉತ್ಕೃಷ್ಟತೆಯ ಕೃಷಿಯಲ್ಲಿ ಶಿಸ್ತು, ದೃಢವಿಶ್ವಾಸ ಮತ್ತು ಏಕಾಗ್ರತೆ ಅತಿ ಪ್ರಮುಖವಾಗಿದೆ. ಶಿಕ್ಷಣ ಸಂಸ್ಥೆಗಳು ಶ್ರೇಷ್ಠತೆಯ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಬೇಕು. ಪ್ರಪಂಚ ಸಾಗುತ್ತಿರುವ ಈ ಸನ್ನಿವೇಶದಲ್ಲಿ ಇದು ಕಡ್ಡಾಯವೂ ಆಗಿದೆ.  ಸಾಧಾರಣ ಮಟ್ಟದಲ್ಲಿ ಸಾಗಿದರೆ ಅದು ದೀರ್ಘಕಾಲ ಉಳಿಯುವುದಿಲ್ಲ ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ.

1893 ರಲ್ಲಿ ಸ್ವಾಮಿ ವಿವೇಕಾನಂದರು ಷಿಕಾಗೋ ಧರ್ಮ ಸಂಸತ್‍ನಲ್ಲಿ ಮಾಡಿದ ಭಾಷಣವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ಧರ್ಮ, ಆಧ್ಯಾತ್ಮಿಕತೆ, ರಾಷ್ಟ್ರೀಯತೆ, ಶಿಕ್ಷಣ, ತತ್ವಶಾಸ್ತ್ರ, ಸಾಮಾಜಿಕ ಸುಧಾರಣೆ, ಬಡತನ ನಿವಾರಣೆ ಮತ್ತು ಸಾರ್ವಜನಿಕ ಸಬಲೀಕರಣದ ಕುರಿತಾದ ಅವರ  ಅಭಿಪ್ರಾಯಗಳು ತಮ್ಮ ಮೇಲೆ ಪ್ರಭಾವ ಬೀರಿವೆ ಎಂದು ಹೇಳಿದ್ದಾರೆ ಎಂಬುದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ.

21 ನೇ ಶತಮಾನದ ಸವಾಲುಗಳನ್ನು ಎದುರಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ಈಗಿನಿಂದಲೇ ಆಮೂಲಾಗ್ರ ಬದಲಾವಣೆಯ ಅವಶ್ಯಕತೆಯಿದೆ ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com