ಚೀನಾ ಆತಿಕ್ರಮಣ ಮಾಡಿದ ಭೂಮಿ ಹಿಂಪಡೆಯುವಿರಾ? ಅಥವಾ 'ದೇವರ ಆಟ'ಎಂದು ಸುಮ್ಮನಾಗುವಿರಾ: ಕೇಂದ್ರಕ್ಕೆ ರಾಹುಲ್ ಗಾಂಧಿ ಪ್ರಶ್ನೆ

'ಚೀನಾ ಅತಿಕ್ರಮಣ ಮಾಡಿರುವ ಭೂಮಿಯನ್ನು' ಹಿಂಪಡೆಯಲು ಯಾವುದೇ ಯೋಜನೆ ರೂಪಿಸುತ್ತಿದ್ದೀರಾ ಅಥವಾ ಅದನ್ನೂ 'ದೇವರ ಆಟ' ಎಂದು ಸುಮ್ಮನಿರುವಿರಾ? ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ನವದೆಹಲಿ: 'ಚೀನಾ ಅತಿಕ್ರಮಣ ಮಾಡಿರುವ ಭೂಮಿಯನ್ನು' ಹಿಂಪಡೆಯಲು ಯಾವುದೇ ಯೋಜನೆ ರೂಪಿಸುತ್ತಿದ್ದೀರಾ ಅಥವಾ ಅದನ್ನೂ 'ದೇವರ ಆಟ' ಎಂದು ಸುಮ್ಮನಿರುವಿರಾ? ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

"ಚೀನಿಯರು ನಮ್ಮ ಭೂಮಿಯನ್ನು ಕಬಳಿಸಿದ್ದಾರೆ.ಅದನ್ನು ಮರಳಿ ಪಡೆಯಲು ಭಾರತ ಸರ್ಕಾರ ಏನು ತಯಾರಿ ನಡೆಸಿದೆ? ಅಥವಾ ಇದನ್ನೂ' ದೇವರ ಆಟ' ಎಂದು ಕೈಬಿಡುತ್ತೀರಾ?" ಕಾಂಗ್ರೆಸ್ ನಾಯಕ ಟ್ವೀಟ್  ನಲ್ಲಿ ಪ್ರಶ್ನಿಸಿದ್ದಾರೆ.

ಭಾರತವು ಇತ್ತೀಚೆಗೆ ಪ್ಯಾಂಗೊಂಗ್ ಸರೋವರದ ದಕ್ಷಿಣ ದಂಡೆಯ ಸಮೀಪ ಎತ್ತರದ ಶಿಖರದ ಮೇಲೆ ಹಿಡಿತ ಸಾಧಿಸುವ ಮೂಲಕ ಚೀನಾವನ್ನು ಕಟ್ಟಿಹಾಕಿದೆ. . ಲಡಾಖ್‌ನ ಚುಶುಲ್ ಬಳಿಯ ದಕ್ಷಿಣದ ದಂಡೆಯ ಪಾಂಗೊಂಗ್ ತ್ಸೊ ಬಳಿಯ ಭಾರತೀಯ ಪ್ರದೇಶಗಳಿಗೆ ಅತಿಕ್ರಮಣ ಮಾಡಲು ಚೀನಾದ ಸೈನಿಕರು ಮಾಡಿದ ಪ್ರಯತ್ನವನ್ನುಇದರ ಮೂಲಕ ತಡೆಹಿಡಿಯಲಾಗಿದೆ.

ಗಲ್ವಾನ್ ಕಣಿವೆ, ಬಿಸಿನೀರ ಬುಗ್ಗೆಯ ಪ್ರದೇಶ ಹಾಗೂ ಕೊಂಗ್ರಂಗ್ನಾಲಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚೀನಾ ಸೈನ್ಯವು ನಡೆಸಿದ ಗಡಿ ಉಲ್ಲಂಘನೆಯ ಬಗ್ಗೆ ಭಾರತ ಮತ್ತು ಚೀನಾ ಏಪ್ರಿಲ್-ಮೇ ತಿಂಗಳಿನಿಂದ ಪರಸ್ಪರ ಭಿನ್ನಾಭಿಪ್ರಾಯವನ್ನು ಹೊಂದಿವೆ. ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನ್ಯದೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

ಕಳೆದ ಶುಕ್ರವಾರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೋದಲ್ಲಿ ನಡೆದ ಎಸ್‌ಸಿಒ ಚರ್ಚೆಯ ಹೊರತಾಗಿ  ಚೀನಾದ  ವಿದೇಶಾಂಗ ಸಚಿವ ಜನರಲ್ ವೀ ಫೆಂಗ್‌ ಜತೆ ಚರ್ಚಿಸಿ ಎಲ್‌ಎಸಿಯ ಉದ್ದಕ್ಕೂ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸಲು ಚೀನಾದ ಸೈನ್ಯದ ಪ್ರಯತ್ನಗಳು ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸುತ್ತಿವೆ ಎನ್ನುವುದನ್ನು ಸಿಂಗ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com