ಕುಟುಂಬದ ವಿರೋಧದ ನಡುವೆ ಮದುವೆ: ಪುತ್ರಿ,ಅಳಿಯನ ಮೇಲೆ ಗುಂಡು ಹಾರಿಸಿದ ಪಾಪಿ ತಂದೆ 

ಕುಟುಂಬದ ವಿರೋಧದ ನಡುವೆ ಮದುವೆಯಾದ ದಂಪತಿ ಮೇಲೆ ಹುಡುಗಿಯ ತಂದೆಯೇ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ರಾಂಪುರ ಜಿಲ್ಲೆಯ ಸೈದಾನಗರದಲ್ಲಿ ನಡೆದಿದೆ. ಆದರೆ, ಅವರಿಬ್ಬರೂ ಗಾಯಗಳಿಂದಾಗಿ ಬದುಕಿಳಿದಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಎಎಸ್ ಪಿ ಅರುಣ್ ಕುಮಾರ್
ಎಎಸ್ ಪಿ ಅರುಣ್ ಕುಮಾರ್
Updated on

ರಾಂಪುರ: ಕುಟುಂಬದ ವಿರೋಧದ ನಡುವೆ ಮದುವೆಯಾದ ದಂಪತಿ ಮೇಲೆ ಹುಡುಗಿಯ ತಂದೆಯೇ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ರಾಂಪುರ ಜಿಲ್ಲೆಯ ಸೈದಾನಗರದಲ್ಲಿ ನಡೆದಿದೆ. ಆದರೆ, ಅವರಿಬ್ಬರೂ ಗಾಯಗಳಿಂದಾಗಿ ಬದುಕಿಳಿದಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಮಾಹಿತಿ ನೀಡಿದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್, ಪ್ರಶಾಂತ್ ಕುಮಾರ್ ಎಂಬವರು ಉತ್ತರ ಖಂಡ್ ರಾಜ್ಯದ ಕಾಶಿಪುರ್ ನ ಮಹಿಳೆಯನ್ನು ಈ ತಿಂಗಳ ಆರಂಭದಲ್ಲಿ ವಿವಾಹವಾಗಿದ್ದಾರೆ.ಪ್ರಾಥಮಿಕ ಮಾಹಿತಿ ಪ್ರಕಾರ, ಹುಡುಗಿಯ ತಂದೆ ದಂಪತಿ ಮೇಲೆ ಗುಂಡು ಹಾರಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಯಿಂದ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯುವಂತೆ ವೈದ್ಯರು ಶಿಫಾರಸು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.ಈ ಪ್ರಕರಣ ಸಂಬಂಧ ಎಫ್ ಐಆರ್ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ತಮ್ಮ ತಂದೆಯೇ ಗುಂಡು ಹಾರಿಸಿದ್ದಾಗಿ ಸಂತ್ರಸ್ಥೆ ಕಾಮಿನಿ ಗೌತಮ್  ಹೇಳಿಕೆಯಲ್ಲಿ ತಿಳಿಸಿದ್ದಾರೆ.ಹುಡುಗಿಯ ಕುಟುಂಬದವರ ಒಪ್ಪಿಗೆ ಇಲ್ಲದೆ ಮದುವೆಯಾಗಿದ್ದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com