ನೀಟ್ ಪರೀಕ್ಷಾ ಅಭ್ಯರ್ಥಿಗಳಿಗೆ ಕೋಲ್ಕತ್ತಾ ಮೆಟ್ರೊದಿಂದ ಇಂದು ವಿಶೇಷ ರೈಲು ಸಂಚಾರ;ನಿಯಮಿತ ರೈಲು ಸಂಚಾರ ನಾಳೆ ಆರಂಭ

ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕೋಲ್ಕತ್ತಾ ಮೆಟ್ರೊ ರೈಲು ಭಾನುವಾರ ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗಾಗಿ ವಿಶೇಷ ಸಂಚಾರ ನಡೆಸಿತು. ಕೋಲ್ಕತ್ತಾದಲ್ಲಿ ನಾಳೆ ಮೆಟ್ರೊ ಸಂಚಾರ ಆರಂಭವಾಗಲಿದೆ.
ಕೋಲ್ಕತ್ತಾ ಮೆಟ್ರೊ(ಸಂಗ್ರಹ ಚಿತ್ರ)
ಕೋಲ್ಕತ್ತಾ ಮೆಟ್ರೊ(ಸಂಗ್ರಹ ಚಿತ್ರ)

ಕೋಲ್ಕತ್ತಾ:ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸುಮಾರು 6 ತಿಂಗಳು ಸ್ಥಗಿತಗೊಂಡಿದ್ದ ಕೋಲ್ಕತ್ತಾ ಮೆಟ್ರೊ ರೈಲು ಭಾನುವಾರ ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗಾಗಿ ವಿಶೇಷ ಸಂಚಾರ ನಡೆಸಿತು. ಕೋಲ್ಕತ್ತಾದಲ್ಲಿ ನಾಳೆ ನಿಯಮಿತವಾಗಿ ಮೆಟ್ರೊ ಸಂಚಾರ ಆರಂಭವಾಗಲಿದೆ.

ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಶಿಷ್ಟಾಚಾರ, ನಿಯಮಗಳೊಂದಿಗೆ ನಾಳೆ ಮೆಟ್ರೊ ಸಂಚಾರ ಆರಂಭವಾಗಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ನೀಟ್ ಪರೀಕ್ಷೆಗೆ ಹಾಜರಾಗುವವರಿಗೆ ಉತ್ತರ-ದಕ್ಷಿಣ ಮಾರ್ಗದ ನೊಪರಾ ಮತ್ತು ಕವಿ ಸುಭಾಷ್ ನಲ್ಲಿ ಮೆಟ್ರೊ ಸಂಚಾರ ನಡೆಸಿತು. ನೀಟ್ ಪರೀಕ್ಷೆಗೆ ಹಾಜರಾಗುವವರು ಪ್ರವೇಶ ಪತ್ರಗಳನ್ನು ತೋರಿಸಿ ಮೆಟ್ರೊದ ಪ್ರವೇಶ ದ್ವಾರದಲ್ಲಿ ಒಳಗೆ ಹೋಗಬೇಕಾಗಿತ್ತು. ಧರ್ಮಲ್ ಸ್ಕಾನಿಂಗ್ ಮಾಡಿ, ಸ್ಯಾನಿಟೈಸರ್ ನ್ನು ಕೈಗೆ ಹಚ್ಚಿಕೊಂಡು ಪೊಲೀಸ್ ಸಿಬ್ಬಂದಿ ಮತ್ತು ಮೆಟ್ರೊ ಸಿಬ್ಬಂದಿ ನೀಟ್ ಪರೀಕ್ಷಾ ಅಭ್ಯರ್ಥಿಗಳು ಮತ್ತು ಅವರ ಪೋಷಕರನ್ನು ತಪಾಸಣೆ ಮಾಡಿ ಒಳಗೆ ಬಿಡುತ್ತಿದ್ದರು.

15 ನಿಮಿಷಗಳ ಅಂತರದಲ್ಲಿ ಇಂದು ಸಾಯಂಕಾಲ 7 ಗಂಟೆಯವರೆಗೆ ಮೆಟ್ರೊ ಸಂಚಾರ ನಡೆಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com