ಕೊಲೆ ಆರೋಪಿಗಳ ಬಂಧನ: ಪಂಜಾಬ್‌ ಸಿಎಂ, ಪೋಲಿಸ್‌ಗೆ ಸುರೇಶ್‌ ರೈನಾ ಧನ್ಯವಾದ

ತಮ್ಮ ಸಂಬಂಧಿಕರ ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ಆಟಗಾರ ಸುರೇಶ್‌ ರೈನಾ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್‌ ಸಿಂಗ್‌ ಹಾಗೂ ಪಂಜಾಬ್‌ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಅಮರೀಂದರ್ ಸಿಂಗ್-ಸುರೇಶ್ ರೈನಾ
ಅಮರೀಂದರ್ ಸಿಂಗ್-ಸುರೇಶ್ ರೈನಾ
Updated on: 

ನವದೆಹಲಿ: ತಮ್ಮ ಸಂಬಂಧಿಕರ ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ಆಟಗಾರ ಸುರೇಶ್‌ ರೈನಾ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್‌ ಸಿಂಗ್‌ ಹಾಗೂ ಪಂಜಾಬ್‌ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ಪ್ರಕರಣ ಸಂಬಂಧ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಈ ಹಿಂದೆ ಚೆನ್ನೈ ಸೂಪರ್‌ ಕಿಂಗ್ಸ್ ಬ್ಯಾಟ್ಸ್‌ಮನ್‌ ಪಂಜಾಬ್‌ ಮುಖ್ಯಮಂತ್ರಿಗಳು ಹಾಗೂ ಪಂಜಾಬ್‌ ಪೊಲೀಸ್‌ ಇಲಾಖೆಗೆ ಮನವಿ ಮಾಡಿದ್ದರು. ಈ ದುರ್ಘಟನೆಯಿಂದಾಗಿ ಎಡಗೈ ಬ್ಯಾಟ್ಸ್‌ಮನ್‌ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಿಂದ ಹೊರ ನಡೆದಿದ್ದರು.

ಸುರೇಶ್‌ ರೈನಾ ಸಂಬಧಿಕರ ಕೊಲೆ ಪ್ರಕರಣ ಸಂಬಂಧ ಅಂತಾರಾಜ್ಯದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್ ಸಿಂಗ್‌ ಬುಧವಾರ ಬೆಳಗ್ಗೆ ತಿಳಿಸಿದ್ದರು.  

ಆಗಸ್ಟ್ 19 ರಂದು ಮಧ್ಯೆರಾತ್ರಿ ದರೋಡೆಕೋರರು ಸುರೇಶ್ ರೈನಾ ಅವರ ಮಾವ ಮತ್ತು ಅತ್ತೆಯ ಮನೆಯ ದಾಳಿ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com