ರಾಜ್ಯಗಳಿಗೆ ಸಹಾಯ ಮಾಡಲು ವಿಶ್ವಬ್ಯಾಂಕ್ ನಿಂದ ಸಾಲ ಪಡೆಯಿರಿ: ಕೇಂದ್ರಕ್ಕೆ ಶಿವಸೇನೆ ಆಗ್ರಹ

 ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಶಿವಸೇನೆ ಶುಕ್ರವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಸ್ತುತ ಪರಿಸ್ಥಿತಿಗೆ ಕೊರೋನಾವೈರಸ್ ಪ್ರೇರಿತ ಲಾಕ್‌ಡೌನ್‌, ಅಪನಗದೀಕರಣ ಮತ್ತು ಸರ್ಕಾರದ "ತಪ್ಪಾದ ನಿರ್ವಹಣೆ"ಕಾರಣ ಎಂದು ಹೇಳಿದೆ. 
ಶಿವಸೇನೆ
ಶಿವಸೇನೆ

ಮುಂಬೈ: ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಶಿವಸೇನೆ ಶುಕ್ರವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಸ್ತುತ ಪರಿಸ್ಥಿತಿಗೆ ಕೊರೋನಾವೈರಸ್ ಪ್ರೇರಿತ ಲಾಕ್‌ಡೌನ್‌, ಅಪನಗದೀಕರಣ ಮತ್ತು ಸರ್ಕಾರದ "ತಪ್ಪಾದ ನಿರ್ವಹಣೆ"ಕಾರಣ ಎಂದು ಹೇಳಿದೆ. 

ಶಿವಸೇನೆ ಮುಖವಾಣಿ "ಸಾಮ್ನಾ"ದಲ್ಲಿ ಸಂಪಾದಕೀಯವು ಎನ್‌ಡಿಎ ಸರ್ಕಾರವನ್ನು "ಬಿಕ್ಕಟ್ಟಿನಿಂದ ಕೈ ತೊಳೆದುಕೊಳ್ಳಲು ಪ್ರಯತ್ನಿಸುತ್ತಿದೆ" ಎಂದಿದೆ.

"ಮಾರ್ಚ್ 13 ರಂದು ಕೇಂದ್ರ ಆರೋಗ್ಯ ಸಚಿವ ಹರ್ಷವಧನ್ ಅವರು ದೇಶದಲ್ಲಿ ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿ ಇಲ್ಲ ಎಂದು ಹೇಳಿದರು, ಆದರೆ ಮಾರ್ಚ್ 22 ರಂದು ಪ್ರಧಾನಿ ಒಂದು ದಿನದ 'ಜನತಾ ಕರ್ಫ್ಯೂ' ವಿಧಿಸಿದರು ಮತ್ತು ಮಾರ್ಚ್ 24 ರಂದು ಕೇವಲ ನಾಲ್ಕು ದಿನಗಳೊಂದಿಗೆ 21 ದಿನಗಳ ಲಾಕ್ ಡೌನ್ ಘೋಷಿಸಿದರು. ಆ ದಿನ ಪ್ರಾರಂಭವಾದ ಅವ್ಯವಸ್ಥೆ ಮತ್ತು ಅನಿಶ್ಚಿತತೆಯು ಈಗಲೂ ಮುಂದುವರೆದಿದೆ" ಎಂದು ಬಿಜೆಪಿಯ ಮಾಜಿ ಮಿತ್ರಪಕ್ಷ ಆರೋಪಿಸಿದೆ.

ದೇಶದಲ್ಲಿ ಲಾಕ್ ಡೌನ್ ಅನ್ನು "ತಪ್ಪಾಗಿ ನಿರ್ವಹಿಸಲಾಗಿದೆ" ಎಂದಿರುವ ಶಿವಸೇನೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರವು ರಾಜ್ಯಗಳೊಂದಿಗೆ ದೃಢವಾಗಿ ನಿಲ್ಲುವುದು ಅಗತ್ಯ ಎಂದಿದೆ. 

"(ಕಾಂಗ್ರೆಸ್ ನೇತೃತ್ವದ) ಯುಪಿಎ ಸರ್ಕಾರವು ಗುಜರಾತ್ ಸರ್ಕಾರಕ್ಕೆ ವಿಪತ್ತಿನ ಸಮಯದಲ್ಲಿ (ಬಿಜೆಪಿ ಆಡಳಿತದಲ್ಲಿ) ಎಲ್ಲಾ ಸಹಾಯವನ್ನು ನೀಡಿತ್ತು. ಇದು ಕೇಂದ್ರದ ಕೆಲಸ." ಕೇಂದ್ರದ ಬೊಕ್ಕಸಕ್ಕೆ ಕನಿಷ್ಠ 22 ಶೇಕಡಾ ಆದಾಯವು ಮುಂಬೈನಿಂದ ಬರುತ್ತಿದೆ.  ಆದರೆ ರಾಜ್ಯಗಳಿಗೆ ಸಹಾಯ ಮಾಡಲು ಕೇಂದ್ರ ಸಿದ್ಧವಾಗಿಲ್ಲ.

"ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ತಮಿಳುನಾಡು ಮತ್ತು ದೆಹಲಿಗಳು ಕೋವಿಡ್ -19ನಿಂದ ಗರಿಷ್ಠ ನಷ್ಟವನ್ನು ಭರಿಸಿದ್ದು, 14.4 ಲಕ್ಷ ಕೋಟಿ ರೂ. ನಷ್ಟವಾಗಿದೆ." ಎಂದು ಸೇನೆ ಹೇಳಿದೆ. ಲಾಕ್ ಡೌನ್ ಸಮಯದಲ್ಲಿ ಕೇಂದ್ರವು 20 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿದೆ, ಆದರೆ ಹಣ ಎಲ್ಲಿ ಹೋಯಿತು ಎನ್ನುವುದು ನಿಗೂಢ.  ಕೋವಿಡ್ -19 ಬಿಕ್ಕಟ್ಟು ಮತ್ತು ನಂತರದ ಲಾಕ್‌ಡೌನ್‌ನಿಂದ ಉಂಟಾದ ಸಮಸ್ಯೆ ಎದುರಿಸಲು  ಹಲವಾರು ರಾಜ್ಯಗಳು ಕೇಂದ್ರದಿಂದ ಆರ್ಥಿಕ ನೆರವು ಕೋರಿವೆ. ಶಿವಸೇನೆ ಆಡಳಿತಾರೂಢ ಮುಖ್ಯಸ್ಥರಾದ ಮಹಾರಾಷ್ಟ್ರ ತನ್ನ ಜಿಎಸ್ಟಿ ಪಾಲು 23,000 ಕೋಟಿ ರೂಪಾಯಿಗಳನ್ನು ಕೇಳಿದೆ ಎಂದು ಪತ್ರಿಕೆ ಸಂಪಾದಕೀಯದಲ್ಲಿ ಹೇಳಿದೆ.

"ಕೋಬಿಡ್ 19 ವಿರುದ್ಧ ಹೋರಾಡಲು ಅಗತ್ಯವಾಗಿದ್ದ ವೈದ್ಯಕೀಯ ಉಪಕರಣಗಳ ಸರಬರಾಜನ್ನು ಕೇಂದ್ರವು ಸೆಪ್ಟೆಂಬರ್‌ನಲ್ಲಿ ನಿಲ್ಲಿಸಿದೆ. ಇದರಿಂದ ಮಹಾರಾಷ್ಟ್ರದ ರಾಜ್ಯ ಬೊಕ್ಕಸಕ್ಕೆ  300 ಕೋಟಿ ರೂ.ಗಳ ಹೊರೆ ಬಿದ್ದಿದೆ. "

ಆರ್ಥಿಕ ಬಿಕ್ಕಟ್ಟಿಗೆ ಕೇಂದ್ರವೇ ಕಾರಣ, ಅದು ವಿಶ್ವಬ್ಯಾಂಕ್‌ನಿಂದ ಸಾಲ ತೆಗೆದುಕೊಂಡು ರಾಜ್ಯಗಳಿಗೆ ಸಹಾಯ ಮಾಡಬೇಕು ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.  ಕೋವಿಡ್ -19 ಬಿಕ್ಕಟ್ಟಿನ ಮಧ್ಯೆ ಈ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 23.9 ರಷ್ಟು ಕುಗ್ಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com