ಮೋದಿ ಸರ್ಕಾರ ಕೆಲವೊಮ್ಮೆ ದೇವರನ್ನು, ಕೆಲವೊಮ್ಮೆ ಜನರನ್ನು ದೂಷಿಸುತ್ತದೆ, ಆದರೆ ಆದಕ್ಕೆ ತನ್ನ ತಪ್ಪಿನ ಅರಿವಿಲ್ಲ: ರಾಹುಲ್

ಮೋದಿ ಸರ್ಕಾರವು ಕೆಲವೊಮ್ಮೆ ದೇವರನ್ನು, ಕೆಲವೊಮ್ಮೆ ಜನರನ್ನು ದೂಷಿಸುತ್ತದೆ ಹೊರತು ತನ್ನ ದುರಾಡಳಿತದ ಬಗ್ಗೆ ಅರಿವಾಗುತ್ತಿಲ್ಲವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 
ಮೋದಿ-ರಾಹುಲ್
ಮೋದಿ-ರಾಹುಲ್

ನವದೆಹಲಿ: ಮೋದಿ ಸರ್ಕಾರವು ಕೆಲವೊಮ್ಮೆ ದೇವರನ್ನು, ಕೆಲವೊಮ್ಮೆ ಜನರನ್ನು ದೂಷಿಸುತ್ತದೆ ಹೊರತು ತನ್ನ ದುರಾಡಳಿತದ ಬಗ್ಗೆ ಅರಿವಾಗುತ್ತಿಲ್ಲವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಮಹಾಮಾರಿ ಕೊರೋನಾ ವೈರಸ್ ಹರಡಲು ಜನರ ಬೇಜವಾಬ್ದಾರಿ ಕಾರಣ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಹೇಳಿದ್ದು ಇದನ್ನು ರಾಹುಲ್ ಗಾಂಧಿ ಖಂಡಿಸಿದ್ದಾರೆ. 

ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಯ ವೇಳೆ ಕೊರೋನಾ ಸಂಬಂಧ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಹರ್ಷವರ್ಧನ್ ಅವರು ಸಾಮಾಜಿಕ ಬೇಜಾಬ್ದಾರಿಯಿಂದಾಗಿ ದೇಶದಲ್ಲಿ ಕೊರೋನಾ 19 ಹರಡುತ್ತಿದೆ ಎಂದು ಹೇಳಿದ್ದರು. 

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಮೋದಿಯ ಆಟವನ್ನು ದೇಶದ ಇನ್ನೆಷ್ಟು ಜನರು ಭರಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com