ಪದ್ಮಭೂಷಣ ಪುರಸ್ಕೃತೆ ಆರ್ಥಿಕ ತಜ್ಞೆ ಐಷರ್ ಅಹ್ಲುವಾಲಿಯಾ ಮೆದುಳು ಕ್ಯಾನ್ಸರ್ ನಿಂದ ನಿಧನ

10 ತಿಂಗಳಿಂದ ಮೆದುಳು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಪದ್ಮಭೂಷಣ ಪುರಸ್ಕೃತೆ, ಆರ್ಥಿಕ ತಜ್ಞೆ ಐಷರ್ ಅಹ್ಲುವಾಲಿಯಾ ಅವರು ಕೊನೆಗೂ ಕ್ಯಾನ್ಸರ್ ಅನ್ನು ಗೆಲ್ಲಲಾಗದೆ ಮೃತಪಟ್ಟಿದ್ದಾರೆ.
ಐಷರ್ ಅಹ್ಲುವಾಲಿಯಾ
ಐಷರ್ ಅಹ್ಲುವಾಲಿಯಾ
Updated on: 

ನವದೆಹಲಿ: 10 ತಿಂಗಳಿಂದ ಮೆದುಳು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಪದ್ಮಭೂಷಣ ಪುರಸ್ಕೃತೆ, ಆರ್ಥಿಕ ತಜ್ಞೆ ಐಷರ್ ಅಹ್ಲುವಾಲಿಯಾ ಅವರು ಕೊನೆಗೂ ಕ್ಯಾನ್ಸರ್ ಅನ್ನು ಗೆಲ್ಲಲಾಗದೆ ಮೃತಪಟ್ಟಿದ್ದಾರೆ. 

ಚಿಕಿತ್ಸೆ ಫಲಕಾರಿಯಾಗದೆ 74 ವರ್ಷದ ಅಹ್ಲುವಾಲಿಯಾ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಕಿರಣ್ ಮಜುಂದಾರ್-ಶಾ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಐಷರ್ ಅಹ್ಲುವಾಲಿಯಾ ಅವರು ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ವಿವಾಹವಾಗಿದ್ದರು. ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ 2009ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು. 

ಅಹ್ಲುವಾಲಿಯ ಅವರು ದೆಹಲಿ ಮೂಲದ ಥಿಂಕ್ ಟ್ಯಾಂಕ್ ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರನ್ಯಾಷನಲ್ ಎಕನಾಮಿಕ್ ರಿಲೇಶನ್ಸ್(ಐಸಿಆರ್ಐಇಆರ್) ಅಧ್ಯಕ್ಷರಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com