ಅಮಿತ್ ಷಾ ಭರವಸೆ: ಲಡಾಕ್ ಮಂಡಳಿ ಚುನಾವಣೆ ಬಹಿಷ್ಕಾರ ಹಿಂಪಡೆದ ಎಲ್ಎಚ್ ಡಿಸಿ

ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಶನಿವಾರ ನಡೆದ ಸಭೆಯ ನಂತರ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿರುವ ಲೇಹ್ ನ ರಾಜಕೀಯ ಪ್ರತಿನಿಧಿಗಳ ನಿಯೋಗ, ಲೇಹ್ -ಲಡಾಕ್ ಸ್ವಾಯತ್ತ ಪರ್ವತ ಅಭಿವೃದ್ಧಿ ಮಂಡಳಿ(ಎಲ್ಎಚ್ ಡಿಸಿ) ಚುನಾವಣೆ ಬಹಿಷ್ಕಾರ ಕರೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಭಾನುವಾರ ಪ್ರಕಟಿಸಿದೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಶನಿವಾರ ನಡೆದ ಸಭೆಯ ನಂತರ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿರುವ ಲೇಹ್ ನ ರಾಜಕೀಯ ಪ್ರತಿನಿಧಿಗಳ ನಿಯೋಗ, ಲೇಹ್ -ಲಡಾಕ್ ಸ್ವಾಯತ್ತ ಪರ್ವತ ಅಭಿವೃದ್ಧಿ ಮಂಡಳಿ(ಎಲ್ಎಚ್ ಡಿಸಿ) ಚುನಾವಣೆ ಬಹಿಷ್ಕಾರ ಕರೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಭಾನುವಾರ ಪ್ರಕಟಿಸಿದೆ.

ಇಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಯುವ ಜನರು ಮತ್ತು ಕ್ರೀಡಾ ವ್ಯವಹಾರಗಳ ಸಚಿವ ಕಿರೆನ್ ರಿಜಿಜು, ಲಡಾಕ್ ಜನರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸುವಾಗ ಸಂವಿಧಾನದ ಆರನೇ ಪರಿಚ್ಛೇದದಡಿ ಲಡಾಕ್ ಜನರ ರಕ್ಷಣೆ ಕುರಿತು ಚರ್ಚಿಸಲು ಸರ್ಕಾರ ಮುಕ್ತವಾಗಿದೆ ಎಂದು ಹೇಳಿದರು.

ಭಾಷೆ, ಜನಸಂಖ್ಯೆ, ಜನಾಂಗೀಯತೆ, ಜಮೀನ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸುವುದು ಎಂದು ನಿಯೋಗಕ್ಕೆ ಭರವಸೆ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು  ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳ ಪ್ರತಿನಿಧಿಗಳನ್ನು ಒಳಗೊಂಡ ಲಡಾಕ್ ನಿಯೋಗದ ನಡುವಿನ ಮಾತುಕತೆ ಎಲ್ಎಚ್ ಡಿಎಸಿ  ಚುನಾವಣೆ ಮುಕ್ತಾಯಗೊಂಡ 15 ದಿನಗಳ ನಂತರ ಆರಂಭವಾಗಲಿದೆ. ಈ ಸಂಬಂಧ ಯಾವುದೇ ತೀರ್ಮಾನವನ್ನು ಲೇಹ್ ಮತ್ತು ಕಾರ್ಗಿಲ್ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಲಾಗುವುದು ಎಂದು ರಿಜಿಜು ಹೇಳಿದ್ದಾರೆ.

ಸಂವಿಧಾನದ ಆರನೇ ಪರಿಚ್ಛೇಧ ಬುಡಕಟ್ಟು ಜನರಿಗೆ ರಕ್ಷಣೆ ಒದಗಿಸುತ್ತದೆ. ಸ್ವಾಯತ್ತ ಅಭಿವೃದ್ಧಿ ಮಂಡಳಿಗಳನ್ನು ರಚಿಸುವ ಮೂಲಕ ಸಮುದಾಯಗಳಿಗೆ ಸ್ವಾಯತ್ತತೆಯನ್ನು ಒದಗಿಸುತ್ತದೆ. ಮಂಡಳಿಯು ಜಮೀನು, ಸಾರ್ವಜನಿಕ ಆರೋಗ್ಯ, ಕೃಷಿ ಕುರಿತು ಕಾನೂನುಗಳನ್ನು ರೂಪಿಸಬಹುದಾಗಿದೆ. ಸದ್ಯ, ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂನಲ್ಲಿ 10 ಸ್ವಾಯತ್ತ ಮಂಡಳಿಗಳು ಅಸ್ತಿತ್ವದಲ್ಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com