
ಭೂಪಾಲ್: ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಹೇಳಿದ್ದಾರೆ.ಮಧ್ಯಪ್ರದೇಶ ಡಿಜಿಪಿ ಪುರುಷೋತ್ತಮ ಶರ್ಮಾ, ತನ್ನ ಹೆಂಡತಿ ಮೇಲೆ ಹಲ್ಲೆ ಮಾಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು.
ಅಧಿಕಾರಿಯನ್ನು ತನ್ನ ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಕಾನೂನನ್ನು ಕೈಗೆ ತೆಗೆದುಕೊಳ್ಳುವ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಶರ್ಮಾ ಪುತ್ರ ಪಾರ್ಥ, ಈ ವಿಡಿಯೋವನ್ನು ರಾಜ್ಯ ಗೃಹ ಸಚಿವ ನಾರೊತ್ತಮ್ ಮಿಶ್ರಾ ಸೇರಿದಂತೆ ಕೆಲ ಅಧಿಕಾರಿಗಳಿಗೆ ಕಳುಹಿಸಿದ್ದು, ತನ್ನ ತಂದೆ ವಿರುದ್ಧವೇ ದೂರು ದಾಖಲಿಸಿದ್ದಾರೆ.
32 ವರ್ಷಗಳಿಂದ ಆಕೆ ನನ್ನೊಂದಿಗಿದ್ದು, 2008ರಲ್ಲಿ ನನ್ನ ವಿರುದ್ಧ ದೂರು ದಾಖಲಿಸಿದ್ದಳು. ಆದರೆ, 2008ರಿಂದಲೂ ನನ್ನ ಮನೆಯಲ್ಲಿದ್ದು, ಎಲ್ಲಾ ಸೌಕರ್ಯಗಳನ್ನು ಅನುಭವಿಸಿ, ನನ್ನ ಹಣದಲ್ಲಿ ವಿದೇಶ ಸುತ್ತಿ ಬಂದಿದ್ದಾರೆ ಎಂದು ಹೆಚ್ಚುವರಿ ಡಿಜಿ ಪುರುಷೋತ್ತಮ ಶರ್ಮಾ ತಿಳಿಸಿದ್ದಾರೆ.
Advertisement