ವಿಡಿಯೊ ಸಂದೇಶದಲ್ಲಿ ದೂರದೃಷ್ಟಿಯೇ ಇಲ್ಲ, ಪ್ರಧಾನಿಯನ್ನು ಶೋಮ್ಯಾನ್ ಎಂದು ಕರೆದ ಶಶಿ ತರೂರ್!

ಪ್ರಧಾನಿ ನರೇಂದ್ರ ಮೋದಿಯವರ ಶುಕ್ರವಾರದ ವಿಡಿಯೊ ಸಂದೇಶದಲ್ಲಿ ಯಾವುದೇ ದೂರದೃಷ್ಟಿಯಿಲ್ಲ ಎಂದು ಕಾಂಗ್ರೆಸ್ ನಾಯಕ ಸಂಸದ ಶಶಿ ತರೂರ್ ಟೀಕಿಸಿದ್ದಾರೆ.

Published: 03rd April 2020 12:00 PM  |   Last Updated: 03rd April 2020 12:00 PM   |  A+A-


Posted By : Sumana Upadhyaya
Source : Online Desk

ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿಯವರ ಶುಕ್ರವಾರದ ವಿಡಿಯೊ ಸಂದೇಶದಲ್ಲಿ ಯಾವುದೇ ದೂರದೃಷ್ಟಿಯಿಲ್ಲ ಎಂದು ಕಾಂಗ್ರೆಸ್ ನಾಯಕ ಸಂಸದ ಶಶಿ ತರೂರ್ ಟೀಕಿಸಿದ್ದಾರೆ.

ಇಂದು ಬೆಳಗ್ಗೆ 9 ಗಂಟೆಗೆ ಪ್ರಧಾನಿ ಮೋದಿ ದೇಶದ ಜನತೆಯನ್ನುದ್ದೇಶಿಸಿ ಕೊರೋನಾ ವೈರಸ್ ಬಗ್ಗೆ ಮಾತನಾಡಿದ್ದರು. ಇದು ಪ್ರಸಾರವಾದ ಕೆಲವೇ ಹೊತ್ತಿನಲ್ಲಿ ಸಂದೇಶ ಆಲಿಸಿ ಟ್ವೀಟ್ ಮಾಡಿರುವ ಶಶಿ ತರೂರ್ ಪ್ರಧಾನಿಯವರನ್ನು ಪ್ರಧಾನ್ ಶೋಮ್ಯಾನ್ ಎಂದು ಉಲ್ಲೇಖಿಸಿದ್ದಾರೆ.

ಈ ಲಾಕ್ ಡೌನ್ ಸಂದರ್ಭದಲ್ಲಿ ಜನರ ನೋವು, ಅವರ ಭಾರ, ಆರ್ಥಿಕ ಸಂಕಷ್ಟದಿಂದ ಹೊರಬರುವುದು, ಜೀವನವನ್ನು ಸುಲಭವಾಗಿಸುವ ಪರಿಹಾರಗಳ ಬಗ್ಗೆ ಪ್ರಧಾನಿ ಮಾತನಾಡಿಲ್ಲ. ಲಾಕ್ ಡೌನ್ ನಂತರದ ಭವಿಷ್ಯದ ಬಗ್ಗೆ ದೂರದೃಷ್ಟಿಯಿಲ್ಲ, ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪವಿಲ್ಲ. ಭಾರತದ ಫೋಟೋ-ಆಪ್ ಪ್ರಧಾನ ಮಂತ್ರಿಯವರು ಸೃಷ್ಟಿಸಿದ ಉತ್ತಮ ಕ್ಷಣದಂತೆ ಅನ್ನಿಸಿತು ಎಂದು ತರೂರ್ ಬರೆದಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp