ಕೊರೋನಾ ವೈರಸ್ ಹರಡುವಿಕೆ: ತಬ್ಲಿಘಿಗಳ ವಿರುದ್ಧ ಆರೋಪ ಮಾಡಿದ್ದ ಯುವಕನ ಭೀಕರ ಹತ್ಯೆ!

ದೇಶಾದ್ಯಂತ ಕೊರೋನಾ ವೈರಸ್ ಹರಡುವಿಕೆ ಬಗ್ಗೆ ನಿರ್ದಿಷ್ಟ ಸಮುದಾಯ ಹಾಗೂ ತಬ್ಲಿಘಿ ಜಮಾತ್ ನ್ನು ದೂಷಿಸಿದ್ದ ಯುವಕನನ್ನು ಭೀಕರವಾಗಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪ್ರಯಾಗ್ ನಲ್ಲಿ ನಡೆದಿದೆ. 

Published: 05th April 2020 07:34 PM  |   Last Updated: 05th April 2020 07:34 PM   |  A+A-


Youth accuses Tabhligi Jaamat of spreading coronavirus, shot dead in Prayagraj

ಕೊರೋನಾ ವೈರಸ್ ಹರಡುವಿಕೆ: ತಬ್ಲಿಘಿಗಳ ವಿರುದ್ಧ ಆರೋಪ ಮಾಡಿದ್ದ ಯುವಕನ ಭೀಕರ ಹತ್ಯೆ!

Posted By : Srinivas Rao BV
Source : Online Desk

ಪ್ರಯಾಗ್: ದೇಶಾದ್ಯಂತ ಕೊರೋನಾ ವೈರಸ್ ಹರಡುವಿಕೆ ಬಗ್ಗೆ ನಿರ್ದಿಷ್ಟ ಸಮುದಾಯ ಹಾಗೂ ತಬ್ಲಿಘಿ ಜಮಾತ್ ನ್ನು ದೂಷಿಸಿದ್ದ ಯುವಕನನ್ನು ಭೀಕರವಾಗಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪ್ರಯಾಗ್ ನಲ್ಲಿ ನಡೆದಿದೆ. 

ಪ್ರಯಾಗ್ ನ ಕರೇಲಿಯಲ್ಲಿರುವ ತನ್ನ ಮನೆಯ ಹೊರಗೆ ನಿಂತಿದ್ದಾಗ ಅನಾಮಿಕ ದುಷ್ಕರ್ಮಿಗಳು ಬಂದು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಪ್ರಕರಣದ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. 

ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ ಮೃತರ ಕುಟುಂಬಕ್ಕೆ ಯೋಗಿ ಆದಿತ್ಯನಾಥ್ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp