ಮಧ್ಯಪ್ರದೇಶದಲ್ಲಿ 215 ಕೊರೋನಾ ಸೋಂಕಿತ ಪ್ರಕರಣಗಳು: ಭೋಪಾಲ್ ನಲ್ಲಿ ದಾಖಲೆಯ ಏರಿಕೆ!

ಮಧ್ಯಪ್ರದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 215 ಕ್ಕೆ ಏರಿಕೆಯಾಗಿದ್ದು, 21 ದಿನಗಳ ಲಾಕ್ ಡೌನ್ ನ ಮಧ್ಯಭಾಗದಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. 
ಮಧ್ಯಪ್ರದೇಶದಲ್ಲಿ 215 ಕೊರೋನಾ ಸೋಂಕಿತ ಪ್ರಕರಣಗಳು: ಭೋಪಾಲ್ ನಲ್ಲಿ ದಾಖಲೆಯ ಏರಿಕೆ!
ಮಧ್ಯಪ್ರದೇಶದಲ್ಲಿ 215 ಕೊರೋನಾ ಸೋಂಕಿತ ಪ್ರಕರಣಗಳು: ಭೋಪಾಲ್ ನಲ್ಲಿ ದಾಖಲೆಯ ಏರಿಕೆ!

ಭೋಪಾಲ್: ಮಧ್ಯಪ್ರದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 215 ಕ್ಕೆ ಏರಿಕೆಯಾಗಿದ್ದು, 21 ದಿನಗಳ ಲಾಕ್ ಡೌನ್ ನ ಮಧ್ಯಭಾಗದಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. 

ಭಾನುವಾರ ಏ.05 ರಂದು ಒಂದೇ ದಿನ ಭೋಪಾಲ್ ನಲ್ಲಿ 22 ಜನರಿಗೆ ಸೋಂಕು ದೃಢಪಟ್ಟಿದ್ದು, 18ರಿಂದ 44 ಕ್ಕೆ ಏರಿಕೆಯಾಗಿದೆ ಎಂದು ಭೋಪಾಲ್ ನ ಮುಖ್ಯ ವೈದ್ಯ, ಆರೋಗ್ಯಾಧಿಕಾರಿ ಡಾ. ಸುಧೀರ್ ಕುಮಾರ್ ಹೇಳಿದ್ದಾರೆ. 

ಏ.05 ರಂದು ರಾತ್ರಿ ಬಿಡುಗಡೆಯಾಗಿರುವ ಮಾಹಿತಿಯ ಪ್ರಕಾರ 97 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗಿದ್ದು, 23 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಹೆಚ್ಚಿನವು ಆರೋಗ್ಯ ಇಲಾಖೆ ಅಥವಾ ತಬ್ಲಿಘಿ ಜಮಾತ್ ಗೆ ಸಂಬಂಧಪಟ್ಟಿದ್ದಾಗಿವೆ, ಆದರೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಭೋಪಾಲ್ ನಲ್ಲಿ ಪ್ರಮುಖ ತರಕಾರಿ ಸಗಟು ವ್ಯಾಪಾರಿಯೊಬ್ಬರಿಗೆ ಕೊರೋನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಭೋಪಾಲ್ ನ ಎಲ್ಲಾ ತರಕಾರಿ ಮಾರುಕಟ್ಟೆಗಳನ್ನೂ ಬಂದ್ ಮಾಡಿಸಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com