ಅವಶ್ಯಕ ವೈದ್ಯಕೀಯ ನೆರವು ಮೊದಲು ಭಾರತೀಯರಿಗೆ ಸಿಗುವಂತಾಗಲಿ: ರಾಹುಲ್ ಗಾಂಧಿ

ಅವಶ್ಯಕ ವೈದ್ಯಕೀಯ ನೆರವು ಮೊದಲು ಭಾರತೀಯರಿಗೆ ಸಿಗುವಂತಾಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಅವಶ್ಯಕ ವೈದ್ಯಕೀಯ ನೆರವು ಮೊದಲು ಭಾರತೀಯರಿಗೆ ಸಿಗುವಂತಾಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಮಲೇರಿಯಾ ಮಾತ್ರೆಗಳಿಗಾಗಿ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪ್ರತೀಕಾರ ತೀರಿಸಿಕೊಳ್ಳಲು ಯಾರೂ ಗೆಳೆತನ ಮಾಡುವುದಿಲ್ಲ ಎಂದು ಹೇಳಿರುವ ರಾಹುಲ್ ಗಾಂಧಿ, ಮಾನವೀಯ ನೆರವಿನ ಆಧಾರದ ಮೇಲೆ ಟ್ರಂಪ್ ಮನವಿ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಮಾನವೀಯ ನೆರವಿನ ನೆಲೆಗಟ್ಟಿನಲ್ಲಿ ವಿದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯೂ ಸೇರಿದಂತೆ ಒಟ್ಟು 24 ವಿವಿಧ ಮಾತ್ರೆಗಳನ್ನು ರಫ್ತು ಮಾಡಲು ಭಾರತ ಸಮ್ಮಿತಿ ಸೂಚಿಸಿರುವುದಕ್ಕೆ ರಾಹುಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಸಂಕಷ್ಟದ ಸಮಯದಲ್ಲಿ ಮಾನವೀಯ ನೆರವು ನೀಡುವುದು ನ್ಯಾಯಸಮ್ಮತ ಎಂದಿರುವ ರಾಹುಲ್ ಗಾಂಧಿ, ಅದಾಗ್ಯೂ ಈ ಅವಶ್ಯಕ ಮಾತ್ರೆಗಳು ಮೊದಲು ಭಾರತೀಯರಿಗೆ ಲಭ್ಯವಾಗುವಂತೆ ನೊಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com