ಸೀಜ್ ಮಾಡಿ ಠಾಣೆಯಲ್ಲಿರಿಸಿದ್ದ ಮದ್ಯ ಮಾರಾಟ ಮಾಡಿದ ಪೊಲೀಸ್ ಕಾನ್ಸ್ ಟೇಬಲ್ ಹಾಗೂ ಬಿಜೆಪಿ ಮುಖಂಡ...!

ಕೊರೊನಾ ಹೆಮ್ಮಾರಿಯಿಂದಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಮದ್ಯಪ್ರಿಯರಿಗೆ ಕುಡಿಯಲು ಮದ್ಯ ಲಭಿಸದೆ ತೀವ್ರ ತೊಂದರೆ ಅನುಭವಿಸುತ್ತಿರುವುದನ್ನು ಕಂಡು ಮರುಕ ಉಂಟಾಯಿತೋ ಏನೋ...! 
ಮದ್ಯ
ಮದ್ಯ

ಪ್ರಯಾಗರಾಜ್(ಉತ್ತರಪ್ರದೇಶ): ಕೊರೊನಾ ಹೆಮ್ಮಾರಿಯಿಂದಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಮದ್ಯಪ್ರಿಯರಿಗೆ ಕುಡಿಯಲು ಮದ್ಯ ಲಭಿಸದೆ ತೀವ್ರ ತೊಂದರೆ ಅನುಭವಿಸುತ್ತಿರುವುದನ್ನು ಕಂಡು ಮರುಕ ಉಂಟಾಯಿತೋ ಏನೋ...! 

ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಯಲ್ಲಿಯೇ ವಶಪಡಿಸಿಕೊಂಡು ಇರಿಸಿದ್ದ ಮದ್ಯವನ್ನು ಮಾರಾಟ ಮಾಡಲು ಆಲೋಚನೆ ಮಾಡಿದ ಹೆಡ್ ಕಾನ್ಸ್ ಟೇಬಲ್, ಅಂದುಕೊಂಡ ತಕ್ಷಣವೇ ಸ್ಥಳೀಯ ಮುಖಂಡನೊಬ್ಬನ ಜೊತೆ ಸೇರಿ ಕೆಲಸವನ್ನು ಪೂರೈಸಿಬಿಟ್ಟ. ಆದರೆ, ಈ ಕೃತ್ಯ ಬಯಲುಗೊಂಡಿದೆ. ಪೊಲೀಸರು ಪ್ರಕರಣ ಪತ್ತೆಹಚ್ಚಿ ಹೆಡ್ ಕಾನ್‌ಸ್ಟೆಬಲ್ ಸೇರಿ ಮೂವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಉತ್ತರ ಪ್ರದೇಶ ಪ್ರಯಾಗರಾಜ್‌ನಲ್ಲಿರುವ ಸೊರೊನ್ ಪೊಲೀಸರು ಲಾಕ್ ಡೌನ್ ಹಿನ್ನಲೆಯಲ್ಲಿ ರಯಾ ಎಂಬ ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡು, ಠಾಣೆಯಲ್ಲಿರಿಸಿದ್ದರು. ಆದೇ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಹದ್ದೂರ್ ಎಂಬುವರು, ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಇತರ ಇಬ್ಬರು ಜೊತೆ ಸೇರಿ ಗಾತ್ರದ ಠಾಣೆಯಲ್ಲಿರಿಸಿದ್ದ ಮದ್ಯವನ್ನು ಹೊರಗೆ ಸಾಗಿಸಿ, ಮಾರಾಟ ಮಾಡಲು ಆರಂಭಿಸಿದ್ದರು. 

ಈ ಕುರಿತು ಸ್ಥಳೀಯರು ನೀಡಿದ ಮಾಹಿತಿಯಿಂದ ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು, ಸಹದ್ಯೋಗಿ ಹೆಡ್ ಕಾನ್ಸ್ ಟೇಬಲ್ ಸೇರಿ ಕೃತ್ಯ ಎಸಗಿದ ಎಲ್ಲರನ್ನೂ ಬಂಧಿಸಿದ್ದಾರೆ. ಆರೋಪಿಗಳು ನೂರಕ್ಕೂ ಹೆಚ್ಚು ಬಾಕ್ಸ್ ಗಳ ಮದ್ಯವನ್ನು ಮಾರಾಟ ಮಾಡಿದ್ದಾರೆ ಎಂದು ಪ್ರಯಾಗರಾಜ್ ಎಸ್‌ಎಸ್‌ಪಿ ಸತ್ಯಾರ್ಥ್ ಅನಿರುದ್ಧ್ ಪಂಕಜ್ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com