ಜಮ್ಮು-ಕಾಶ್ಮೀರ: ಕಿಶ್ತವರ್‌ನಲ್ಲಿ ಶಂಕಿತ ಉಗ್ರರಿಂದ ದಾಳಿ; ವಿಶೇಷ ಪೊಲೀಸ್ ಅಧಿಕಾರಿ ಹುತಾತ್ಮ

ಉಗ್ರರ ಗುಂಪೊಂದು ಅವರ ಶಸ್ತ್ರಾಸ್ತ್ರಗಳನ್ನು ಕಿತ್ತು ದಾಳಿ ನಡೆಸಿದ ಪರಿಣಾಮ ಓರ್ವ ವಿಶೇಷ ಪೊಲೀಸ್ ಅಧಿಕಾರಿ ಸಾವನ್ನಪ್ಪಿ, ಮತ್ತೊಬ್ಬರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕಿಶ್ತವರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು: ಉಗ್ರರ ಗುಂಪೊಂದು ಅವರ ಶಸ್ತ್ರಾಸ್ತ್ರಗಳನ್ನು ಕಿತ್ತು ದಾಳಿ ನಡೆಸಿದ ಪರಿಣಾಮ ಓರ್ವ ವಿಶೇಷ ಪೊಲೀಸ್ ಅಧಿಕಾರಿ ಸಾವನ್ನಪ್ಪಿ, ಮತ್ತೊಬ್ಬರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕಿಶ್ತವರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. 

ಶಂಕಿತ ಉಗ್ರರು ಸೋಮವಾರ ಮಧ್ಯಾಹ್ನ ಕಿಶ್ತವರ್ ಜಿಲ್ಲೆಯ ತಂದನ್‌ ಗ್ರಾಮದಲ್ಲಿ ಪೊಲೀಸರ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡು ಅವರ ಮೇಲೆ ದಾಳಿ ನಡೆಸಿದ ಪರಿಣಾಮ ಓರ್ವ ವಿಶೇಷ ಪೊಲೀಸ್ ಅಧಿಕಾರಿ ಸಾವನ್ನಪ್ಪಿ, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ದಾಳಿಯ ಬಳಿಕ ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ. ಸಿಬ್ಬಂದಿ ಎರಡು ಬಂದೂಕುಗಳನ್ನು ಉಗ್ರರು ಅಪಹರಿಸಿದ್ದಾರೆ. ಉಗ್ರರ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ ಎಂದು ಅದು ತಿಳಿಸಿದೆ.

ಎಸ್‌ಪಿಒಗಳಾದ ಪಶೀದ್ ಇಕ್ಬಾಲ್ (1328) ಮತ್ತು ವಿಶಾಲ್ ಸಿಂಗ್ (1342) ಇಬ್ಬರನ್ನು ತಂದರ್, ದಚ್ಚನ್, ಕಿಶ್ತವರ್ ಎಂಬಲ್ಲಿನ ಎಸ್‌ಒಜಿ ಪೊಲೀಸ್ ಪೋಸ್ಟ್ ನಲ್ಲಿ ನಿಯೋಜಿಸಲಾಗಿತ್ತು. ಅವರಿಬ್ಬರೂ ಗಸ್ತು ತಿರುಗುತ್ತಿದ್ದಾಗ ತಾಂಡರ್, ದಚನ್ ನಿವಾಸಿಗಳಾದ ಗುಲಾಮ್ ಖಾದಿರ್ ಗೈನೂ ಅವರ ಪುತ್ರ ಬಶರತ್ ಹುಸೇನ್ ಮತ್ತು ಬಶೀರ್ ಅಹ್ಮದ್ ಅವರ ಪುತ್ರ ಆಶಿಕ್ ಹುಸೇನ್ ದಾಳಿ ನಡೆಸಿದ್ದು, ಪರಿಣಾಮ ಎಸ್‌ಪಿಒ ಪಶೀದ್ ಇಕ್ಬಾಲ್ ಹುತಾತ್ಮರಾಗಿದ್ದಾರೆ. ಇನ್ನೊಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಸೋಮವಾರ ತಿಳಿಸಿದ್ದಾರೆ. ದಾಳಿಕೋರರಿಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿಕೋರರನ್ನು ಬಂಧಿಸಲು ಎಸ್‌ಒಜಿ ಮತ್ತು ಸೇನೆಯು ಈ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಸಿಂಗ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com