ಮೇ 4ರಿಂದ ದೇಶೀಯ, ಜೂನ್ 1ರಿಂದ ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್ ಬುಕಿಂಗ್ ಆರಂಭಿಸಿದ ಏರ್ ಇಂಡಿಯಾ

ಸರ್ಕಾರಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮೇ 4 ರಿಂದ ದೇಶೀಯ ವಿಮಾನಗಳ ಮತ್ತು ಜೂನ್ 1 ರಿಂದ ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಿಸುತ್ತಿದ್ದು, ಪ್ರಯಾಣಿಕರಿಗೆ ಟಿಕೆಟ್ ನೀಡಲು ಪ್ರಾರಂಭಿಸಿದೆ.
ಏರ್ ಇಂಡಿಯಾ
ಏರ್ ಇಂಡಿಯಾ

ನವದೆಹಲಿ: ಸರ್ಕಾರಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮೇ 4 ರಿಂದ ದೇಶೀಯ ವಿಮಾನಗಳ ಮತ್ತು ಜೂನ್ 1 ರಿಂದ ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಿಸುತ್ತಿದ್ದು, ಪ್ರಯಾಣಿಕರಿಗೆ ಟಿಕೆಟ್ ನೀಡಲು ಪ್ರಾರಂಭಿಸಿದೆ.

ಎರಡನೇ ಹಂತದ ಲಾಕ್‌ಡೌನ್ ಮುಗಿದ ನಂತರ ಮೇ 4 ರಿಂದ ಆಯ್ದ ಮಾರ್ಗಗಳಲ್ಲಿ ದೇಶೀಯ ವಿಮಾನಯಾನಗಳನ್ನು ಆರಂಭಿಸಲಿದೆ ಎಂದು ಕಂಪನಿ ತಿಳಿಸಿದೆ.

ಜೂನ್ 1 ರಿಂದ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಗಳು ಪ್ರಾರಂಭವಾಗಲಿವೆ. ಖಾಸಗಿ ವಿಮಾನಯಾನ ಕಂಪನಿಗಳು ಈಗಾಗಲೇ ಮೇ 4 ರಿಂದ ಬುಕಿಂಗ್ ಪ್ರಾರಂಭಿಸಿವೆ.

ಮಾರ್ಚ್ 24 ರಿಂದ ಸರ್ಕಾರವು ದೇಶಾದ್ಯಂತ ಲಾಕ್ ಡೌನ್ ಜಾರಿಗೆ ತಂದಿರುವುದು ಗಮನಾರ್ಹ. ಇದನ್ನು ಮೊದಲು ಏಪ್ರಿಲ್ 14 ರವರೆಗೆ ಜಾರಿಗೆ ತರಲಾಗಿತ್ತು. ಈಗ ಲಾಕ್‌ಡೌನ್ ಅನ್ನು ಮೇ 3 ಕ್ಕೆ ವಿಸ್ತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com