'ಕೊರೋನಾ ಪಿಡುಗಿನಿಂದ ಮನುಕುಲ ಹೊರಬರಲಿದೆ'; ಸಚಿವರ ಕಾರ್ಯವೈಖರಿಗೆ ಮೋದಿ ಮೆಚ್ಚುಗೆ

ಲಾಕ್ ಡೌನ್ ವೇಳೆ ಜನತೆಗೆ ಸಹಾಯ ಮಾಡುತ್ತಿರುವ ತಮ್ಮ ಕ್ಯಾಬಿನೆಟ್ ಸಚಿವರ ಕಾರ್ಯವೈಖರಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಲಾಕ್ ಡೌನ್ ವೇಳೆ ಜನತೆಗೆ ಸಹಾಯ ಮಾಡುತ್ತಿರುವ ತಮ್ಮ ಕ್ಯಾಬಿನೆಟ್ ಸಚಿವರ ಕಾರ್ಯವೈಖರಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇದೇ ವೇಳೆ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಭಾರತೀಯರಿಗೆ ಒಗ್ಗಟ್ಟಿನ ಸಂದೇಶ ಕಳಿಸಲು ಸ್ವಿಟ್ಜರ್ಲ್ಯಾಂಡ್ ನ ಮ್ಯಾಟರ್ಹಾರ್ನ್ ಪರ್ವತದಲ್ಲಿ ತ್ರಿವರ್ಣ ಧ್ವಜ ಮೂಡಿಸಿದ್ದ ಚಿತ್ರವನ್ನು ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ 'ಕೊರೋನಾ ಪಿಡುಗಿನಿಂದ ಮನುಕುಲ ಹೊರಬರಲಿದೆ' ಎಂದು ಹೇಳಿದ್ದಾರೆ.

"ಭಾರತೀಯ ರೈಲ್ವೆ ತಂಡದ ಬಗ್ಗೆ ಹೆಮ್ಮೆ ಇದೆ, ಮಹತ್ವದ ಸಮಯದಲ್ಲಿ ಅವರು ನಿರಂತರವಾಗಿ ಜನತೆಗೆ ಸಹಾಯ ಮಾಡುತ್ತಿದ್ದಾರೆ" ಎಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರ ಟ್ವೀಟ್ ಒಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಪ್ಯಾಸೆಂಜರ್ ರೈಲುಗಳು ಸ್ಥಗಿತಗೊಂಡಿದ್ದರೂ ರೈಲ್ವೆ ಕಾರ್ಯನಿರ್ವಹಣೆ ಸ್ಥಗಿತಗೊಂಡಿಲ್ಲ, ನಿರಂತರ ಶ್ರಮದಿಂದ ರೈಲ್ವೆ ರಾಷ್ಟ್ರವನ್ನು ಸುಗಮವಾಗಿ ನಡೆಯುವಂತೆ ಮಾಡಿದೆ ಎಂದು ಪಿಯೂಷ್ ಗೋಯೆಲ್  ಟ್ವೀಟ್ ಮಾಡಿದ್ದರು. 

ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದು, ಲಾಕ್ ಡೌನ್ ವೇಳೆ ಜನತೆಗೆ ಎಲ್ ಪಿಜಿ ಸಿಲೆಂಡರ್ ಗಳನ್ನು ಪೂರೈಕೆ ಮಾಡುತ್ತಿರುವ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಮೋದಿ, ದೇಶಾದ್ಯಂತ ಹಗಳಿರುಳೆನ್ನದೇ ಕೆಲಸ ನಿರ್ವಹಿಸುತ್ತಿರುವವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಆದಾಯ ತೆರಿಗೆ ಇಲಾಖೆ ಸಣ್ಣ, ಮಧ್ಯಮ ಅತಿ ಸಣ್ಣ ಉದ್ದಿಮೆಗಳಿಗೆ ಆದಾಯ ತೆರಿಗೆ ಮರುಪಾವತಿಯಲ್ಲಿ 5,204 ಕೋಟಿ ರೂಪಾಯಿಯಷ್ಟು ರಿಲೀಫ್ ನೀಡಿದೆ. ಮೋದಿ ಈ ಬಗ್ಗೆ ಕೂಡ ಟ್ವೀಟ್ ಮಾಡಿದ್ದು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸಹಾಯ ಮಾಡಲು ಇಲಾಖೆ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com