ರೆಡ್ ಜೋನ್ ಗಳಲ್ಲಿ ಮೇ.3ರ ನಂತರವೂ ಲಾಕ್ ಡೌನ್ ಮುಂದುವರೆಯಲಿ:ಕೋವಿಡ್-19 ಟಾಸ್ಕ್ ಪೋರ್ಸ್ ಸಲಹೆ

ಹೆಚ್ಚಿನ ಸಂಖ್ಯೆಯ ಕೊರೋನಾವೈರಸ್ ಪ್ರಕರಣಗಳಿಂದಾಗಿ ರೆಡ್ ಜೊನ್ ಅಥವಾ ಹಾಟ್ ಸ್ಪಾಟ್ ಗಳೆಂದು ಜಿಲ್ಲೆಗಳು ಗುರುತಿಸಿರುವ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ದುಪ್ಪಾಟ್ಟಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ 3ರ ನಂತರವೂ ಲಾಕ್ ಡೌನ್ ಮುಂದುವರೆಸುವಂತೆ ಕೋವಿಡ್ -19ನಿರ್ವಹಣೆಗಾಗಿ ರಚನೆಯಾಗಿರುವ ರಾಷ್ಟ್ರೀಯ ಕಾರ್ಯ ಪಡೆ ಸಲಹೆ ನೀಡಿದೆ.
ಪಾದರಾಯನಪುರದ ಚಿತ್ರ
ಪಾದರಾಯನಪುರದ ಚಿತ್ರ

ನವದೆಹಲಿ: ಹೆಚ್ಚಿನ ಸಂಖ್ಯೆಯ ಕೊರೋನಾವೈರಸ್ ಪ್ರಕರಣಗಳಿಂದಾಗಿ ರೆಡ್ ಜೊನ್ ಅಥವಾ ಹಾಟ್ ಸ್ಪಾಟ್ ಗಳೆಂದು ಜಿಲ್ಲೆಗಳು ಗುರುತಿಸಿರುವ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ದುಪ್ಪಾಟ್ಟಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ 3ರ ನಂತರವೂ ಲಾಕ್ ಡೌನ್ ಮುಂದುವರೆಸುವಂತೆ ಕೋವಿಡ್ -19ನಿರ್ವಹಣೆಗಾಗಿ ರಚನೆಯಾಗಿರುವ ರಾಷ್ಟ್ರೀಯ ಕಾರ್ಯ ಪಡೆ ಸಲಹೆ ನೀಡಿದೆ.

ಪ್ರಸ್ತುತ 20 ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ 170 ಜಿಲ್ಲೆಗಳು ಹಾಟ್ ಸ್ಪಾಟ್ ಗಳೆಂಬ ಹಣೆಪಟ್ಟಿ ಕಟ್ಟಿಸಿಕೊಂಡಿವೆ. ಸ್ಥಳೀಯವಾಗಿ ಕಂಟೈನ್ ಮೆಂಟ್ ಜೂನ್ ಗಳೆಂದು ವರ್ಗೀಕರಿಸುವ ಮೂಲಕ ಸೋಂಕು ಹರಡದಂತೆ ಪ್ರಯತ್ನ ನಡೆಸಲಾಗುತ್ತಿದೆ. 

ಈ 170  ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ಕಂಡುಬಂದಿರುವ 123 ಜಿಲ್ಲೆಗಳು ಹಾಗೂ ಕ್ಲಸ್ಟರ್ ಗಳೊಂದಿಗೆ 47 ಜಿಲ್ಲೆಗಳು ಇವೆ. ಹೆಚ್ಚುವರಿಯಾಗಿ 200 ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ.

ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸುವಂತೆ ಶಿಫಾರಸು ಮಾಡಲಾಗಿದೆ ಎಂದು ಕೋವಿಡ್-19 ಟಾಸ್ಕ್ ಪೋರ್ಸ್ ನ ಸದಸ್ಯರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಕೇಂದ್ರದ ಟಾಪ್ ಥಿಂಕ್ ಟ್ಯಾಂಕ್ ಎನ್ನಿಸಿರುವ ನೀತಿ ಆಯೋಗದ ಸದಸ್ಯ ಡಾ. ವಿ. ಕೆ. ಪೌಲ್ ಟಾಸ್ಕ್ ಪೋರ್ಸ್ ನೇತೃತ್ವ ವಹಿಸಿದ್ದಾರೆ. 

ಭಾರತದಲ್ಲಿ ಶೇ.80ಕ್ಕಿಂತ ಹೆಚ್ಚಿನ ಕೇಸ್ ಗಳಲ್ಲಿ  ಹೆಚ್ಚಿನವೂ ಜಿಲ್ಲೆಗಳಿಂದಲೇ  ಬಂದಿವೆ. ನಾಲ್ಕು ದಿನಗಳ ಅಂತರದಲ್ಲಿ ಇದರ ಸಂಖ್ಯೆ ದುಪ್ಪಾಟಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಟ್ ಸ್ಪಾಟ್ ಗಳ ಬಗ್ಗೆ ವಿವರಣೆ ನೀಡಿದೆ. 

ಒಂದು ಸೋಂಕಿನ ಪ್ರಕರಣ ಕಂಡುಬಂದಿರುವ ಕಡೆಗಳಲ್ಲಿಯೂ ಭಾಗಶ:ಲಾಕ್ ಡೌನ್ ಮುಂದುವರೆಸುವಂತೆ ಟಾಸ್ಕ್ ಪೋರ್ಸ್ ಸಲಹೆ ನೀಡಿದೆ. ಆದರೆ, ಕೋವಿಡ್-19 ರೋಗಿಗಳಿಲ್ಲದ ಜಿಲ್ಲೆಗಳಲ್ಲಿ,  ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟುನಿಟ್ಟಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳೊಂದಿಗೆ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ಮರಳಲು ಅನುಮತಿಸಬಹುದು ಎಂದು ಮತ್ತೊಬ್ಬ ಸದಸ್ಯರು ಸ್ಪಷ್ಟಪಡಿಸಿದ್ದಾರೆ.

ಆರೆಂಜ್ ವಲಯಗಳಲ್ಲಿ 14 ದಿನಗಳಲ್ಲಿ ಹಾಗೂ ಗ್ರೀನ್ ಜೋನ್ ಗಳಲ್ಲಿ 28 ದಿನಗಳಲ್ಲಿ ಯಾವುದೇ ಒಂದು ಪ್ರಕರಣಗಳು ಕಂಡುಬಾರದಿದ್ದಲ್ಲಿ ಅಂತಹ ಕಡೆಗಳಲ್ಲಿ ಲಾಕ್ ಡೌನ್ ಸಡಿಲಿಸುವ ನಿರ್ಧಾರ ಕೈಗೊಳ್ಳುವಂತೆ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದಾನ್ ತಿಳಿಸಿದ್ದಾರೆ.

ತಜ್ಞರ ಗುಂಪಿನ ಸಲಹೆ ಹಾಗೂ ಅನೇಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಲಾಕ್ ಡೌನ್ ಮುಂದುವರೆಸಬೇಕಾ ಅಥವಾ ಸಡಿಲಿಸಬೇಕಾ ಎಂಬುದರ ಬಗ್ಗೆ ರಾಜ್ಯಗಳು ಅಂತಿಮ ನಿರ್ಧಾರ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com