ವಲಸೆ ಕಾರ್ಮಿಕರು ಎಂದಿಗೆ ತಂತಮ್ಮ ಊರು ಸೇರಬಹುದು?: ಕೇಂದ್ರ ಸರ್ಕಾರಕ್ಕೆ ಉದ್ದವ್ ಠಾಕ್ರೆ ಪ್ರಶ್ನೆ

ಕೊರೋನಾವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಹೋಗಲಾಗದೆ ಸಮಸ್ಯೆಗೆ ಸಿಲುಕಿದ್ದು ಅವರನ್ನು ಅವರವರ ಸ್ಥಳಗಳಿಗೆ ಗೆ ಕಳುಹಿಸುವ ಕುರಿತು ಈ ತಿಂಗಳ ಅಂತ್ಯದ ವೇಳೆಗೆ ಕೇಂದ್ರವು ಮಾರ್ಗಸೂಚಿಗಳನ್ನು ಹೊರಡಿಸಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ.

Published: 22nd April 2020 12:24 PM  |   Last Updated: 22nd April 2020 01:41 PM   |  A+A-


ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ

Posted By : Raghavendra Adiga
Source : PTI

ಮುಂಬೈ: ಕೊರೋನಾವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಹೋಗಲಾಗದೆ ಸಮಸ್ಯೆಗೆ ಸಿಲುಕಿದ್ದು ಅವರನ್ನು ಅವರವರ ಸ್ಥಳಗಳಿಗೆ ಗೆ ಕಳುಹಿಸುವ ಕುರಿತು ಈ ತಿಂಗಳ ಅಂತ್ಯದ ವೇಳೆಗೆ ಕೇಂದ್ರವು ಮಾರ್ಗಸೂಚಿಗಳನ್ನು ಹೊರಡಿಸಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ.

 ಮಂಗಳವಾರ ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಚ್ಚುವರಿ ಕಾರ್ಯದರ್ಶಿ ಮನೋಜ್ ಜೋಶಿ ನೇತೃತ್ವದ ಕೇಂದ್ರ ತಂಡದೊಂದಿಗೆ ಮಾತನಾಡಿದ ಠಾಕ್ರೆ, ತಮ್ಮ ಸರ್ಕಾರವು ಆರು ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗಾಗಿ ಆಶ್ರಯ ಶಿಬಿರಗಳನ್ನು ತೆರೆದಿದೆ ಮತ್ತು ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಆದರೆ ಅವರು ತಮ್ಮ ತಮ್ಮ ಊರಿಗೆ ತೆರಳಲು ಬಯಸುತ್ತಾರೆ. ಇದಕ್ಕಾಗಿ ಕೆಲವೊಮ್ಮೆ ಪ್ರತಿಭಟನೆ ನಡೆಸುತ್ತಾರೆ ಎಂದು ಅವರು ಕೇಂದ್ರದ ಗಮನ ಸೆಳೆದಿದ್ದಾರೆ.

"ಏಪ್ರಿಲ್ 30 ರಿಂದ ಮೇ 15ರ ನಡುವೆ ಕೊರೋನಾವೈರಸ್ ಹರಡುವಿಕೆ ಹೆಚ್ಚಲಿದೆ ಎಂದು ದ್ರ ಸರ್ಕಾರ ಭಾವಿಸಿದರೆ, ನಗರದಲ್ಲಿ ಸಿಲುಕಿರುವ ಕಾರ್ಮಿಕರನ್ನು ಅದಕ್ಕೂ ಮೊದಲು ತಮ್ಮ ತಮ್ಮ ಊರಿಗೆ ಕಳುಹಿಸುವ ಅವಕಾಶವಿದೆಯೆ ಎನ್ನುವುದನ್ನು ಪರಿಗಣಿಸಬೇಕು. ಸಾಧ್ಯವಾದಲ್ಲಿ  ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಬೇಕು," ಠಾಕ್ರೆ ಹೇಳಿದರು.

ಮುಂಬೈನಂತಹಾ ನಗರಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ಎಂಡ್ ಟಿ ಎಂಡ್ ಮೇಲ್ವಿಚಾರಣೆ ಮಾಡಬಹುದೇ ಎಂದು ಕೇಂದ್ರವು ಪರಿಗಣಿಸಬೇಕು ಮತ್ತು ಕೊರೋನಾವೈರಸ್ ಸ್ ಹರಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವರು ತಮ್ಮ ಮನೆಗಳನ್ನು ತಲುಪಿದ ನಂತರ ನಿರ್ಬಂಂಧದಲ್ಲಿರಿಸಲು ಕ್ರ್ಮ ಕೈಗೊಳ್ಲಬೇಕು ಎಂದು ಠಾಕ್ರೆ ಹೇಳಿದರು. ಈ ಬಗೆಗೆ  ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯದಲ್ಲಿ ಶೇ .80 ರಷ್ಟು ಕೊರೋನಾ  ರೋಗಿಗಳಿಗೆ ಯಾವ ರೋಗಲಕ್ಷಣವಿಲ್ಲ. ಇದಕ್ಕೆ ಕಾರಣವೇನು ಎಂದು ಅಚ್ಚರಿ ವ್ಯಕ್ತಪಡಿಸಿದ ಮಹಾರಾಷ್ಟ್ರ ಸಿಎಂ  ರೋಗವನ್ನು ತಡೆಗಟ್ಟಲು ದುಬೈನಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ಅಧ್ಯಯನ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

"ಅಮೆರಿಕಾದಲ್ಲಿ ಏನು ನಡೆಯುತ್ತಿದೆ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ದುಬೈನಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ಅಧ್ಯಯನ ಮಾಡಬೇಕಾಗಿದೆ. ಈ ಎರಡು ಸ್ಥಳಗಳ ಮೂಲಕ ಕೊರೋನಾ ಮಹಾರಾಷ್ಟ್ರವನ್ನು ಪ್ರವೇಶಿಸಿತು" ಎಂದು ಅವರು ಹೇಳಿದರು. ಕೇಂದ್ರದಿಂದ ಹೆಚ್ಚಿನ ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ), ವೆಂಟಿಲೇಟರ್‌ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳು ಬರಬೇಕೆಂದು ಅವರು ಇದೇ ವೇಳೆ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.. ಅಗತ್ಯವಿದ್ದಲ್ಲಿ ಸೈನ್ಯವು ಯುದ್ಧದ ಆಧಾರದ ಮೇಲೆ ಆಸ್ಪತ್ರೆಗಳನ್ನು ನಿರ್ಮಿಸಲು ಕೇಂದ್ರದ ಮಾರ್ಗದರ್ಶನ ಪಡೆಯಲಿ ಎಂದೂ ಅವರು ಕೋರಿದರು. ಈ ವೇಳೆ ಪಡಿತರ ಚೀಟಿ ಇಲ್ಲದವರಿಗೆ ಆಹಾರ ಧಾನ್ಯಗಳನ್ನು ಒದಗಿಸಲು ಠಾಕ್ರೆ ಕೇಂದ್ರ ಸರ್ಕಾರದ ನಿಯಮಗಳನ್ನು ಸಡಿಲಿಸುವಂತೆ ಕೋರಿದರು

Stay up to date on all the latest ರಾಷ್ಟ್ರೀಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp