ಛತ್ತೀಸ್ ಗಢ: 14 ಗಡಿ ಭದ್ರತಾ ಪಡೆ ಯೋಧರಿಗೆ ಕ್ವಾರಂಟೈನ್!

ಆಗ್ರಾದಿಂದ ಹಿಂತಿರುಗಿದ ನಂತರ ಕೊರೋನಾವೈರಸ್ ಶಂಕೆ ಮೇಲೆ ಛತ್ತೀಸ್ ಗಢದ 14 ಗಡಿ ಭದ್ರತಾ ಪಡೆ ಯೋಧರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಅಂತಿಮ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯ್ಪುರ: ಆಗ್ರಾದಿಂದ ಹಿಂತಿರುಗಿದ ನಂತರ ಕೊರೋನಾವೈರಸ್ ಶಂಕೆ ಮೇಲೆ ಛತ್ತೀಸ್ ಗಢದ 14 ಗಡಿ ಭದ್ರತಾ ಪಡೆ ಯೋಧರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಅಂತಿಮ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಯೋಧರು ಶನಿವಾರ ದೆಹಲಿಯಿಂದ ಆಗ್ರಾ ಮೂಲಕ ಮಧ್ಯ ಭಾರತದ ಭಿಲಾಯ್ ಪಟ್ಟಣವನ್ನು ತಲುಪಿತ್ತು. ಎಲ್ಲಾ 14 ಸಿಬ್ಬಂದಿ ಆಗಮಿಸಿದ ನಂತರ ಪರೀಕ್ಷಿಸಲಾಯಿತು. ನಂತರ ಇಬ್ಬರನ್ನು ನೆರೆಯ ದುರ್ಗ್ ಜಿಲ್ಲೆಯಲ್ಲಿ ಐಸೋಲೇಷನ್ ಸೌಕರ್ಯಕ್ಕಾಗಿ ಕಳುಹಿಸಲಾಯಿತು, ಉಳಿದವರನ್ನು ಬಿಲಾಯ್ ಸ್ಟೀಲ್ ಪ್ಲಾಂಟ್‌ನ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿಯಿಂದ ಪ್ರಯಾಣ ಆರಂಭಿಸಿದ ಬಳಿಕ ಬಿಎಸ್ ಯೋಧರು ಉತ್ತರ ಪ್ರದೇಶದ ಆಗ್ರಾದಲ್ಲಿ 20 ದಿನಗಳ ಕಾಲ ವಾಸ್ತವ್ಯ ಹೂಡಿದ್ದರು. ಆಗ್ರಾ ಕ್ಯಾಂಪ್ ನಲ್ಲಿ  ಅಡುಗೆ ಮಾಡುತ್ತಿದ್ದವರಿಗೆ  ಕೋವಿಡ್-19 ಸೋಂಕು ತಗುಲಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಛತ್ತೀಸ್ ಗಢದ ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿರುವ ಬಿಎಸ್‌ಎಫ್ ಸೈನಿಕರಿಗೆ  ಅಡುಗೆಯವರು ಸೋಂಕನ್ನು ರವಾನಿಸಿರಬಹುದೆಂದು ಅವರು ಹೇಳಿದ್ದಾರೆ. 

ಯಾವುದಾದರೂ ಕೋವಿಡ್-19 ವೈದ್ಯಕೀಯ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು
ಬಿಎಸ್ಎಫ್ ಮಹಾನಿರ್ದೇಶಕ (ಡಿಜಿ) ಎಸ್ ಎಸ್ ದೇಸ್ವಾಲ್, ಇತ್ತೀಚೆಗೆ ತಮ್ಮ ಕಮಾಂಡರ್‌ಗಳು ಮತ್ತು ಸಿಬ್ಬಂದಿಗೆ ಕಠಿಣ ಎಚ್ಚರಿಕೆ ನೀಡಿದ್ದರು. 

ದೇಶದ ಆಂತರಿಕ ಭದ್ರತಾ ಕ್ಷೇತ್ರದಲ್ಲಿ ವಿವಿಧ ಕರ್ತವ್ಯಗಳನ್ನು ನಿರ್ವಹಿಸುವುದರ ಹೊರತಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ಭಾರತೀಯ ಗಡಿಗಳನ್ನು ಕಾಪಾಡುವ ಕಾರ್ಯವನ್ನು ಬಿಎಸ್ಎಫ್ ಮುಖ್ಯವಾಗಿ ನಿರ್ವಹಿಸುತ್ತದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com