ಮತ್ತೆ ಸಿಆರ್ ಪಿಎಫ್ ನ 15 ಸಿಬ್ಬಂದಿಗೆ ಕೊರೋನಾ ವೈರಸ್‌ ಸೋಂಕು

ಅತಿದೊಡ್ಡ ಅರಸೇನಾ ಪಡೆಯಾದ ಕೇಂದ್ರೀಯ ಮೀಸಲು ಪೊಲೀಸ್‍ ಪಡೆ(ಸಿಆರ್‌ಪಿಎಫ್)ಯ ಇನ್ನೂ ಹದಿನೈದು ಯೋಧರಿಗೆ ಕರೋನಾ ವೈರಸ್‌ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತ ಸಿಆರ್ ಪಿಎಫ್ ಸಿಬ್ಬಂದಿ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅತಿದೊಡ್ಡ ಅರಸೇನಾ ಪಡೆಯಾದ ಕೇಂದ್ರೀಯ ಮೀಸಲು ಪೊಲೀಸ್‍ ಪಡೆ(ಸಿಆರ್‌ಪಿಎಫ್)ಯ ಇನ್ನೂ ಹದಿನೈದು ಯೋಧರಿಗೆ ಕರೋನಾ ವೈರಸ್‌ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತ ಸಿಆರ್ ಪಿಎಫ್ ಸಿಬ್ಬಂದಿ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.

ಕೆಲವು ದಿನಗಳ ಹಿಂದೆ ನರ್ಸಿಂಗ್ ಸಹಾಯಕರಾಗಿ ಆಗಿ ಕೆಲಸ ಮಾಡುತ್ತಿದ್ದ ಹೆಡ್ ಕಾನ್ಸ್ಟೇಬಲ್‍ ಸೇರಿದಂತೆ 9 ಸಿಬ್ಬಂದಿಗೆ ಕೊವಿಡ್‍-19 ಸೋಂಕು ದೃಢಪಟ್ಟಿರುವುದಾಗಿ ಘೋಷಿಸಲಾಗಿತ್ತು.  ಈಗ 31ನೇ ಬೆಟಾಲಿಯನ್‍ ಗೆ ಸೇರಿದ 15 ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರಿಗೂ ಪಾಸಿಟಿವ್ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓರ್ವ ಸಹಾಯಕ ಸಬ್ ಇನ್ಸ್ ಪೆಕ್ಟರ್, ನಾಲ್ವರು ಮುಖ್ಯ ಪೇದೆಗಳು ಸೇರಿದಂತೆ 15 ಸಿಆರ್ ಪಿಎಫ್ ಸಿಬ್ಬಂದಿಗೆ ಇಂದು ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಶುಶ್ರೂಷಕ ಸಹಾಯಕ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದಲ್ಲಿ ನಿಯೋಜಿಸಲಾಗಿರುವ 162ನೇ ಬೆಟಾಲಿಯನ್‌ ಗೆ ಸೇರಿದವರಾಗಿದ್ದಾರೆ. ರಜೆಯ ಮೇಲೆ ರಾಷ್ಟ್ರ ರಾಜಧಾನಿ ಪ್ರದೇಶದಕ್ಕೆ ಸೇರಿದ ನೋಯ್ಡಾದಲ್ಲಿದ್ದರು.

ಇಂದು ದೇಶಾದ್ಯಂತ 1,990 ಕೊವಿಡ್-19 ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 26,496ಕ್ಕೆ ಏರಿಕೆಯಾಗಿದೆ. ಇದುವರೆಗೆ ಕೊರೋನಾ ವೈರಸ್ ನಿಂದ 824 ಮಂದಿ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com