ಅರ್ನಾಬ್ ಗೋಸ್ವಾಮಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಜಾಮೀನು

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಮೇಲಿನ ದಾಳಿಗೆ ಸಂಬಂಧಿಸಿದಂತೆ ಬಂಧಿತರಾದ ಇಬ್ಬರಿಗೆ ಬೋಯಿವಾಡಾ ನ್ಯಾಯಾಲಯ ಜಾಮೀನು ನೀಡಿದೆ.
ಅರ್ನಾಬ್ ಗೋಸ್ವಾಮಿ
ಅರ್ನಾಬ್ ಗೋಸ್ವಾಮಿ

ಮುಂಬೈ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಮೇಲಿನ ದಾಳಿಗೆ ಸಂಬಂಧಿಸಿದಂತೆ ಬಂಧಿತರಾದ ಇಬ್ಬರಿಗೆ ಬೋಯಿವಾಡಾ ನ್ಯಾಯಾಲಯ ಜಾಮೀನು ನೀಡಿದೆ.

ಅರ್ನಾಬ್ ಗೋಸ್ವಾಮಿ ಮತ್ತು ಅವರ ಪತ್ನಿ ಸಂಬ್ರಾತಾ ರೇ ಅವರು ಮುಂಬೈನ ರಿಪಬ್ಲಿಕ್ ಸ್ಟುಡಿಯೊದಿಂದ ಹಿಂದಿರುಗುವಾಗ  ದಾಳಿಗೆ ಒಳಗಾಗಿದ್ದರು.ಘಟನೆ ಬಳಿಕ ಗೋಸ್ವಾಮಿ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಗೂಂಡಾಗಳಿಂದ ದೈಹಿಕವಾಗಿ ಹಲ್ಲೆ ನಡೆದಿದೆ ಎಂದು ರೋಪಿಸಿ ವೀಡಿಯೊವನ್ನು ಹಾಕಿದರು

ಈ ಕುರಿತು ಗೋಸ್ವಾಮಿ ದೂರು ದಾಖಲಿಸಿದ್ದು . ಐಪಿಸಿಯ ಸೆಕ್ಷನ್ 341 ಮತ್ತು 504  ಅಡಿಯಲ್ಲಿ ಎನ್ಎಂ ಜೋಶಿ ಮಾರ್ಗ ಪೊಲೀಸ್ ಠಾಣೆಯಲ್ಲಿ  ಎಫ್ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.

ಏತನ್ಮಧ್ಯೆ, ಮುಂಬೈ ಪೊಲೀಸರು ಪ್ರಸ್ತುತ ಅರ್ನಾಬ್ ಗೋಸ್ವಾಮಿಯನ್ನು ಎನ್ಎಂ ಜೋಶಿ ಮಾರ್ಗ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ."ಪೊಲೀಸ್ ಠಾಣೆಯಲ್ಲಿ ಅರ್ನಾಬ್ ಗೋಸ್ವಾಮಿಯ ವಿಚಾರಣೆ ಮುಂದುವರೆದಿದೆ" ಎಂದು  ಚಾನೆಲ್ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com