ನನ್ನ ಮೇಲಿನ ದಾಳಿಗೆ ಸೋನಿಯಾ ಗಾಂಧಿಯೇ ನೇರ ಕಾರಣ: ಅರ್ನಾಬ್ ಗೋಸ್ವಾಮಿ

ಕೆಲಸ ಮುಗಿಸಿ ತಮ್ಮ ಪತ್ನಿಯೊಂದಿಗೆ ಕಾರಿನಲ್ಲಿ ಹೊರಟ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಅವರ ಪತ್ನಿ ಸನಿಯಾ ಗೋಸ್ವಾಮಿ ವಿರುದ್ಧ ನಡೆದ ದಾಳಿಗೆ ಸಂಬಂಧಿಸಿದಂತೆ ಸ್ವತಃ ಅರ್ನಾಬ್ ಗೋಸ್ವಾಮಿಯವರೇ ವಿಡಿಯೊ ಸಂದೇಶದ ಮೂಲಕ ಟ್ವೀಟ್ ಮಾಡಿದ್ದಾರೆ.

Published: 23rd April 2020 09:11 AM  |   Last Updated: 23rd April 2020 12:36 PM   |  A+A-


Arnab Goswami

ಅರ್ನಾಬ್ ಗೋಸ್ವಾಮಿ

Posted By : Sumana Upadhyaya
Source : PTI

ಮುಂಬೈ: ಕೆಲಸ ಮುಗಿಸಿ ತಮ್ಮ ಪತ್ನಿಯೊಂದಿಗೆ ಕಾರಿನಲ್ಲಿ ಹೊರಟ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಅವರ ಪತ್ನಿ ಸನಿಯಾ ಗೋಸ್ವಾಮಿ ವಿರುದ್ಧ ನಡೆದ ದಾಳಿಗೆ ಸಂಬಂಧಿಸಿದಂತೆ ಸ್ವತಃ ಅರ್ನಾಬ್ ಗೋಸ್ವಾಮಿಯವರೇ ವಿಡಿಯೊ ಸಂದೇಶದ ಮೂಲಕ ಟ್ವೀಟ್ ಮಾಡಿದ್ದಾರೆ.

ತಮ್ಮ ಮೇಲೆ ನಡೆದ ದಾಳಿ ಬಗ್ಗೆ ವಿವರಣೆ ನೀಡಿದ ಅವರು, ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕಾರಿನ ಕಿಟಕಿಗಳ ಮೇಲೆ ಒಂದೇ ಸಮನೆ ಹೊಡೆಯಲು ಆರಂಭಿಸಿದರು. ತಮಗೆ ಒಂದು ಪಾಠ ಕಲಿಸಬೇಕೆಂದು ಪಕ್ಷದ ಮೇಲಿನ ನಾಯಕರಿಂದ ಸೂಚನೆ ಪಡೆದು ಈ ರೀತಿ ಕೆಟ್ಟ ವರ್ತನೆ ತೋರಿಸಿದ್ದಾರೆ ಎಂದು ಹೇಳಿದ್ದಾರೆ.

ನಂತರ ನೇರವಾಗಿ ಸೋನಿಯಾ ಗಾಂಧಿ ಹೆಸರು ಪ್ರಸ್ತಾಪಿಸಿದ ಅವರು, ನೀವು ನನ್ನ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ್ದೀರಿ. ನನ್ನ ಮೇಲಿನ ದಾಳಿಗೆ ನೀವೇ ಕಾರಣ ಎಂದು ಹೇಳಿ ತಮ್ಮ 5 ನಿಮಿಷ 50 ಸೆಕೆಂಡುಗಳ ವಿಡಿಯೊದಲ್ಲಿ ಹಲವು ಬಾರಿ ಸೋನಿಯಾ ಗಾಂಧಿ ಹೆಸರು ಪ್ರಸ್ತಾಪಿಸಿ ತಮ್ಮನ್ನು ಎದುರಿಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಅರ್ನಾಬ್ ವಿಡಿಯೊದಲ್ಲಿ ಹೇಳಿದ್ದೇನು?:ಇಂದು ನಡುರಾತ್ರಿ 12.15ರ ಹೊತ್ತಿಗೆ ನಾನು ಮತ್ತು ನನ್ನ ಪತ್ನಿ ಸ್ಟುಡಿಯೊದಿಂದ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಮನೆ ಕಡೆಗೆ ಹೋಗುತ್ತಿದ್ದೆವು. ಇಬ್ಬರು ಬೈಕಿನಲ್ಲಿ ಬಂದು ಓವರ್ ಟೇಕ್ ಮಾಡಿ ನನ್ನ ಕಾರನ್ನು ಅಡ್ಡಗಟ್ಟಿ ನನ್ನೆಡೆಗೆ ಗುರಿಯಾಗಿಟ್ಟು ಕಾರಿನ ಮೇಲೆ ಒಂದೇ ಸಮನೆ ದಾಳಿ ನಡೆಸಿದರು. ಕಾರಿನ ಕಿಟಕಿಗಳನ್ನು ಒಡೆಯಲು ಆರಂಭಿಸಿದರು.

ಯಾವುದೋ ದ್ರಾವಣವನ್ನು ಕಾರಿನ ಮೇಲೆ ಸುರಿದರು.ದಾಳಿಕೋರರು ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು ನನ್ನ ಮೇಲೆ ಹಲ್ಲೆ ಮಾಡಲು ಕಳುಹಿಸಲಾಗಿದೆ ಎಂದು ಭದ್ರತಾ ಸಿಬ್ಬಂದಿ ನನಗೆ ಹೇಳಿದ್ದಾರೆ. ಈ ಘಟನೆ ನನ್ನ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ನಡೆದಿದೆ.

ಈ ದಾಳಿಗೆ ಸೋನಿಯಾ ಗಾಂಧಿಯೇ ನೇರ ಹೊಣೆ. ಸದ್ಯ ಈ ದೇಶದ ಅತಿದೊಡ್ಡ ಹೇಡಿ ನೀವು. ನಿಮಗೆ ನನ್ನನ್ನು ಎದುರಿಸುವ ಧೈರ್ಯ ಇಲ್ಲ. ಈ ಘಟನೆಗೆ ನೀವೇ ಕಾರಣ ಎಂದು ಹೇಳುತ್ತೇನೆ. ನನಗೆ ಏನೇ ಆದರೂ ಅದಕ್ಕೆ ನೀವೇ ಹೊಣೆ ಎಂದು ಸೋನಿಯಾ ಮತ್ತು ಅವರ ಕುಟುಂಬಸ್ಥರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಅರ್ನಾಬ್.

ಪಲ್ಗರ್ ಸಾಮೂಹಿಕ ಹತ್ಯಾಕಾಂಡದಲ್ಲಿ ಇಬ್ಬರು ಸಾಧುಗಳು ಮೃತಪಟ್ಟಿದ್ದು ಈ ಬಗ್ಗೆ ಸೋನಿಯಾ ಗಾಂಧಿಯವರು ಏಕೆ ಮೌನ ವಹಿಸಿದ್ದಾರೆ ಎಂದು ಅರ್ನಾಬ್ ಗೋಸ್ವಾಮಿಯವರು ಪ್ರಶ್ನಿಸಿ ಅದು ಸುದ್ದಿಯಾದ ಬಳಿಕ ಈ ದಾಳಿ ನಡೆದಿದೆ. ಈ ದಾಳಿಯಿಂದ ಸೋನಿಯಾ ಗಾಂಧಿಯವರಿಗೆ ಖುಷಿಯಾಗಿರಬೇಕು, ಅಲ್ಪಸಂಖ್ಯಾತ ಸಮುದಾಯದವರಿಗೆ ಹೀಗೆ ಆಗುತ್ತಿದ್ದರೆ ಅವರು ಸುಮ್ಮನೆ ಕೂರುತ್ತಿದ್ದರೇ ಎಂದು ಅರ್ನಾಬ್ ಪ್ರಶ್ನಿಸಿದ್ದರು.

ಅರ್ನಾಬ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ನಾಯಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿ ಅವರ ವಿರುದ್ಧ ನಿನ್ನೆ ಪೊಲೀಸ್ ಎಫ್ಐಆರ್ ಕೂಡ ದಾಖಲಾಗಿತ್ತು.

 

Stay up to date on all the latest ರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp