ಪೂರ್ವ ಲಡಾಕ್ ನಲ್ಲಿ ಸೇನೆ ಹಿಂತೆಗೆಯುವ ಪ್ರಕ್ರಿಯೆ:ಇಂದು ಭಾರತ-ಚೀನಾ ಮಧ್ಯೆ 5ನೇ ಸುತ್ತಿನ ಮಾತುಕತೆ

ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಎರಡೂ ದೇಶಗಳು ಲಡಾಕ್ ನ ಫಿಂಗರ್ ಪಾಯಿಂಟ್ ನಲ್ಲಿ ಹೊಸ ರಾಜತಾಂತ್ರಿಕ ಸುತ್ತಿನ ಮಾತುಕತೆಯನ್ನು ಭಾನುವಾರ ನಡೆಸಲಿವೆ.
ಭಾರತ-ಚೀನಾ ಗಡಿಭಾಗದಲ್ಲಿ ಕಾವಲು ಕಾಯುತ್ತಿರುವ ಸೈನಿಕರು
ಭಾರತ-ಚೀನಾ ಗಡಿಭಾಗದಲ್ಲಿ ಕಾವಲು ಕಾಯುತ್ತಿರುವ ಸೈನಿಕರು

ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಎರಡೂ ದೇಶಗಳು ಲಡಾಕ್ ನ ಫಿಂಗರ್ ಪಾಯಿಂಟ್ ನಲ್ಲಿ ಹೊಸ ರಾಜತಾಂತ್ರಿಕ ಸುತ್ತಿನ ಮಾತುಕತೆಯನ್ನು ಭಾನುವಾರ ನಡೆಸಲಿವೆ.

ಇಂದು ಬೆಳಗ್ಗೆ 11 ಗಂಟೆಗೆ ಭಾರತ-ಚೀನಾ ಸೇನೆಗಳ ಕಮಾಂಡರ್ ಮಟ್ಟದ ಮಾತುಕತೆ ಗಡಿ ವಾಸ್ತವ ರೇಖೆಯ ಚೀನಾ ಕಡೆಯ ಮೊಲ್ಡೊದಲ್ಲಿ ಏರ್ಪಡಲಿದೆ.

ಕಳೆದ ಮೇ ತಿಂಗಳಿನಿಂದ ಇಲ್ಲಿ ಸೇನೆ ನಿಲುಗಡೆ ಮಾಡಿದ ನಂತರ ಉಂಟಾದ ಉದ್ವಿಗ್ನ ಸ್ಥಿತಿ ವಾತಾವರಣವನ್ನು ಹೊಡೆದೋಡಿಸಿ ಶಾಂತಿ ನೆಲೆಸುವಂತೆ ಮಾಡಲು ಎರಡೂ ದೇಶಗಳ ಮಿಲಿಟರಿ ಮಟ್ಟದ ಮಾತುಕತೆಗಳು ನಡೆದಿದ್ದು ಇಂದಿನ ಮಾತುಕತೆ 5ನೇ ಸುತ್ತಿನದ್ದಾಗಿದೆ.

ಚೀನಾ ಸರ್ಕಾರ ಎರಡೂ ದೇಶಗಳ ಸೇನೆಗಳು ಗಡಿಯಿಂದ ಸಂಪೂರ್ಣವಾಗಿ ಹಿಂತೆಗೆಯಲ್ಪಟ್ಟಿವೆ ಎಂದು ಹೇಳಿದೆ. ಆದರೆ ಮೊನ್ನೆ ಗುರುವಾರ ಹೇಳಿಕೆ ಬಿಡುಗಡೆ ಮಾಡಿದ್ದ ಭಾರತ, ಪೂರ್ವ ಲಡಾಕ್ ನ ಗಡಿಭಾಗದಲ್ಲಿ ಸೇನೆಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮುಂದುವರಿದಿದ್ದು ಇನ್ನೂ ಸೇನೆ ಸಂಪೂರ್ಣವಾಗಿ ಹಿಂತೆಗೆತವಾಗಿಲ್ಲ. ಚೀನಾದ ಸೇನಾಪಡೆ ದೆಪ್ಸಾಂಗ್ ಪ್ಲೈನ್ ಪ್ರದೇಶ, ಗೊಗ್ರಾ ಮತ್ತು ಪೊಂಗೊಂಗ್ ಲೇಕ್ ನ ಫಿಂಗರ್ ಪ್ರದೇಶಗಳಲ್ಲಿ ಇನ್ನೂ ಇದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com