ಟಿಕ್ ಟಾಕ್ ಖರೀದಿಯ ಯೋಜನೆಯಿಂದ ಹಿಂದೆಸರಿದ ಮೈಕ್ರೋಸಾಫ್ಟ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿಕ್ ಟಾಕ್ ನ್ನು ನಿಷೇಧಿಸುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸೂಚನೆ ನೀಡುತ್ತಿದ್ದಂತೆಯೇ ಆ ಸಂಸ್ಥೆಯನ್ನು ಖರೀದಿಸುವ ಯೋಜನೆಯಿಂದ ಮೈಕ್ರೋಸಾಫ್ಟ್ ಹಿಂದೆ ಸರಿದಿದೆ. 
ಮೈಕ್ರೋಸಾಫ್ಟ್
ಮೈಕ್ರೋಸಾಫ್ಟ್

ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿಕ್ ಟಾಕ್ ನ್ನು ನಿಷೇಧಿಸುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸೂಚನೆ ನೀಡುತ್ತಿದ್ದಂತೆಯೇ ಆ ಸಂಸ್ಥೆಯನ್ನು ಖರೀದಿಸುವ ಯೋಜನೆಯಿಂದ ಮೈಕ್ರೋಸಾಫ್ಟ್ ಹಿಂದೆ ಸರಿದಿದೆ. 

ಅಮೆರಿಕದಲ್ಲಿ ಮಾಸಿಕ 80 ಮಿಲಿಯನ್ ಜನ ಟಿಕ್ ಟಾಕ್ ನ್ನು ಬಳಕೆ ಮಾಡುತ್ತಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟಗೊಂಡ ಮಾಹಿತಿಯ ಪ್ರಕಾರ ಅಗ್ರಿಮೆಂಟ್ ಹಂತಕ್ಕೆ ತಲುಪಿದ್ದ ಡೀಲ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆಯ ನಂತರ ಮುರಿದುಬಿದ್ದಿದೆ. 

ಕಾರ್ಯಕಾರಿ ಆದೇಶದ ಮೂಲಕ ಅಮೆರಿಕಾದಲ್ಲಿ ಟಿಕ್ ಟಾಕ್ ಕಾರ್ಯನಿರ್ವಹಣೆಯನ್ನು ನಿಷೇಧಿಸಲಾಗುವುದು ಎಂದು ಟ್ರಂಪ್ ಇತ್ತೀಚೆಗಷ್ಟೇ ಹೇಳಿದ್ದರು. ಈ ಬೆನ್ನಲ್ಲೇ ಟಿಕ್ ಟಾಕ್ ನ ಮಾಲಿಕ ಸಂಸ್ಥೆ ಬೈಟ್ ಡಾನ್ಸ್ ನೊಂದಿಗೆ ಮಾರಾಟಕ್ಕೆ ಸಂಬಂಧಿಸಿದ ಮಾತುಕತೆಯನ್ನು ಮೈಕ್ರೋಸಾಫ್ಟ್ ನಿಲ್ಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com