ಪತ್ನಿಗೆ ಚಿತ್ರಹಿಂಸೆ ಕೊಟ್ಟು ತ್ರಿವಳಿ ತಲಾಕ್ ಮೂಲಕ ವಿಚ್ಚೇದನ ನೀಡಿದ ಕಾಲೇಜು ಶಿಕ್ಷಕನ ಬಂಧನ

ಅಸ್ಸಾಂ ಕಾಲೇಜು ಶಿಕ್ಷಕನೊಬ್ಬ ತನ್ನ ಪತ್ನಿಗೆ ಚಿತ್ರಹಿಂಸೆ ನೀಡಿದ್ದೂ ಅಲ್ಲದೆ ಆಕೆಗೆ ತ್ರಿವಳಿ ತಲಾಕ್ ನಿಡಿದ್ದಾನೆಂಬ ಕಾರಣಕ್ಕೆ  ಪೊಲೀಸರು ಆತನನ್ನು ಬಂಧಿಸಿದ್ದಾರೆ. 
ಪತ್ನಿಗೆ ಚಿತ್ರಹಿಂಸೆ ಕೊಟ್ಟು ತ್ರಿವಳಿ ತಲಾಕ್ ಮೂಲಕ ವಿಚ್ಚೇದನ ನೀಡಿದ ಕಾಲೇಜು ಶಿಕ್ಷಕನ ಬಂಧನ

ಗುವಾಹತಿ: ಅಸ್ಸಾಂ ಕಾಲೇಜು ಶಿಕ್ಷಕನೊಬ್ಬ ತನ್ನ ಪತ್ನಿಗೆ ಚಿತ್ರಹಿಂಸೆ ನೀಡಿದ್ದೂ ಅಲ್ಲದೆ ಆಕೆಗೆ ತ್ರಿವಳಿ ತಲಾಕ್ ನಿಡಿದ್ದಾನೆಂಬ ಕಾರಣಕ್ಕೆ  ಪೊಲೀಸರು ಆತನನ್ನು ಬಂಧಿಸಿದ್ದಾರೆ. 

ಬಂಧಿತನನ್ನು ಸೆಂಟ್ರಲ್ ಅಸ್ಸಾಂನ ಮೊರಿಗಾಂವ್ ಮೂಲದ  ಮೊಹಮ್ಮದ್ ಷರೀಫ್ ಉದ್ದೀನ್ (48) ಎಂದು ಗುರುತಿಸಲಾಗಿದ್ದು ಆತನ ಪತ್ನಿ ಪರ್ವೀನ್ ಅಖ್ತರ್ ಚೌಧರಿ (43) ನೀಡಿದ ದೂರಿನ ಆಧಾರದ ಮೇಲೆ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಪೊಲೀಸರು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು ನ್ಯಾಯಾ;ಅಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. 

ಆರೋಪಿ ಬೇರೆಯೊಬ್ಬ  ಮಹಿಳೆಯನ್ನು ಮದುವೆಯಾಗಲು ಬಯಸಿದ್ದಾನೆ ಆದರೆ ಪತ್ನಿ ಇದಕ್ಕೆ ಒಪ್ಪಿಗೆ ನೀಡದ ಕಾರಣ ಆಕೆಯನ್ನು ಚಿತ್ರಹಿಂಸೆಗೊಳಪಡಿಸಲಾಗಿದೆ.  “ಆರೋಪಿಯು ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸನಾಗಿದ್ದು ಆತ ಎರಡನೇ ಮದುವೆಯಾಗಲು ಬಯಸಿದ್ದ. ಅದಕ್ಕಾಗಿ ತನ್ನ ಮೊದಲ ಪತ್ನಿ ಒಪ್ಪಿಗೆ ಸೂಚಿಸುವಂತೆ ಒತ್ತಾಯಿಸುತ್ತಿದ್ದ.  ಆದರೆ ಅವಳು ಅದನ್ನು ವಿರೋಧಿಸುತ್ತಿದ್ದಂತೆ, ಅವನು ಅವಳನ್ನು ಬಹಳ ಸಮಯದಿಂದ ಹಿಂಸಿಸುತ್ತಿದ್ದನು. ನಿನ್ನೆ (ಸೋಮವಾರ) ಆತ ಮತ್ತೆ ಅವಳನ್ನು ಥಳಿಸಿ, ತ್ರಿವಳಿ ತಲಾಖ್ ಮೂಲಕ ವಿಚ್ಚೇದನ ನೀಡಿದ್ದಾನೆ. ಹಾಗೂ ಆಕೆಯನ್ನು  ಮನೆಯಿಂದ ಹೊರಗೆ ಓಡಿಸಿದ್ದಾನೆ."  ಮೊರಿಗಾಂವ್ ಪೊಲೀಸ್ ವರಿಷ್ಠಾಧಿಕಾರಿ ನಂದಾ ಸಿಂಗ್ ಹೇಳಿದ್ದಾರೆ.

ಆರೋಪಿ ತನ್ನ ಅಳಿಯಂದಿರಿಂದ ತೆಗೆದುಕೊಂಡ 13 ಲಕ್ಷ ರೂ.ಗಳೊಂದಿಗೆ ಒಂದು ಜಮೀನನ್ನು ಖರೀದಿಸಿ ಅಲ್ಲಿ ಮನೆಯನ್ನು ನಿರ್ಮಿಸಿದ್ದ. 

“ಮಹಿಳೆ ಈಗ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದತನ್ನ ಮಗಳೊಂದಿಗೆ ನನ್ನ ಬಳಿಗೆ ಬಂದು ಅಳುತ್ತಿದ್ದಳು. ಈ ವಿಷಯ ನ್ಯಾಯಾಲಯಕ್ಕೆ ತಲುಪಿದ್ದರಿಂದ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ ಮತ್ತುನ್ಯಾಯಾಲಯವೇ ಅದನ್ನು ತೀರ್ಮಾನಿಸುತ್ತದೆ”ಎಂದು ಎಸ್ಪಿ ಹೇಳಿದರು.

ತ್ರಿವಳಿ ತಲಾಕ್ ವಿವಾದಾತ್ಮಕ ಮತ್ತು ಪುರಾತನ ಇಸ್ಲಾಮಿಕ್ ವಿಚ್ಚೇದನ  ಅಭ್ಯಾಸವನ್ನು 2017 ರಲ್ಲಿ ಒಂದು ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನಿಷೇಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com