ಜಿ.ಸಿ ಮುರ್ಮು
ಜಿ.ಸಿ ಮುರ್ಮು

ಜಮ್ಮು-ಕಾಶ್ಮೀರದ ಮಾಜಿ ಲೆಫ್ಟಿನೆಂಟ್ ಗೌರ್ನರ್ ಜಿ.ಸಿ ಮುರ್ಮು ಈಗ ಭಾರತದ ನೂತನ ಸಿಎಜಿ! 

ನೆನ್ನೆಯಷ್ಟೇ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದ ಗಿರೀಶ್  ಮುರ್ಮು ಅವರನ್ನು ಭಾರತದ ನೂತನ ಮಹಾಲೆಕ್ಕ ಪರಿಶೋಧಕ ಹಾಗೂ ಮಹಾಲೇಖಪಾಲ (ಸಿಎಜಿ) ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. 

ನವದೆಹಲಿ: ನೆನ್ನೆಯಷ್ಟೇ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದ ಗಿರೀಶ್  ಮುರ್ಮು ಅವರನ್ನು ಭಾರತದ ನೂತನ ಮಹಾಲೆಕ್ಕ ಪರಿಶೋಧಕ ಹಾಗೂ ಮಹಾಲೇಖಪಾಲ (ಸಿಎಜಿ) ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. 

ಆ.09 ರಂದು ಜಿ.ಸಿ ಮುರ್ಮು ಸಿಎಜಿ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆಡಿಟರ್ ಜನರಲ್ ರಾಜೀವ್ ಮೆಹ್ರಿಷಿ ಅವರಿಗೆ 65 ವರ್ಷ ಪೂರ್ಣಗೊಳ್ಳಲಿದ್ದು, ಈ ವಾರ ನಿವೃತ್ತರಾಗಲಿದ್ದಾರೆ. ಸಿಎಜಿಯಾಗಿ ಅಧಿಕಾರ ಸ್ವೀಕರಿಸುವುದಕ್ಕಾಗಿಯೇ ಜಿ.ಸಿ ಮುರ್ಮು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದರು. 

1985ನೇ ಬ್ಯಾಚ್‌ನ ಗುಜರಾತ್‌ ಕೇಡರ್‌ ಐಎಎಸ್‌ ಅಧಿಕಾರಿಯಾಗಿರುವ ಜಿಸಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.ಮುರ್ಮು ಅವರು ನರೇಂದ್ರ ಮೋದಿ ಗುಜರಾತ್ ನ ಸಿಎಂ ಆಗಿದ್ದಾಗ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com