ನವ ಭಾರತ ನಿರ್ಮಾಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ನೆರವು: ಅಮಿತ್ ಖರೆ

ಹೊಸ ಶಿಕ್ಷಣ ನೀತಿ ಕಲಿಕೆ ಮತ್ತು ಬೋಧನೆ ಕಡೆಗೆ ಗಮನ ಹರಿಸಿದೆ, ಕೇವಲ ಪದವಿ ಪಡೆಯುವುದಕ್ಕೆ ಅಲ್ಲ ಎಂದು ಕೇಂದ್ರ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಮಿತ್ ಖರೆ ಹೇಳಿದ್ದಾರೆ.
ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಕರೆ
ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಕರೆ

ನವದೆಹಲಿ: ಹೊಸ ಶಿಕ್ಷಣ ನೀತಿ ಕಲಿಕೆ ಮತ್ತು ಬೋಧನೆ ಕಡೆಗೆ ಗಮನ ಹರಿಸಿದೆ, ಕೇವಲ ಪದವಿ ಪಡೆಯುವುದಕ್ಕೆ ಅಲ್ಲ ಎಂದು ಕೇಂದ್ರ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಮಿತ್ ಖರೆ ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ 'ಎಕ್ಸ್ ಪ್ರೆಶನ್ಸ್' ನ ನೇರ ವೆಬ್ ಕಾಸ್ಟ್ ಸರಣಿಯಲ್ಲಿ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಹಾಗೂ ಹಿರಿಯ ಪತ್ರಕರ್ತ ಕಾವೇರಿ ಬಮ್ಜೈ ಜೊತೆಗೆ ಮಾತನಾಡುತ್ತಾ  ಅಮಿತ್ ಖರೆ ಈ ರೀತಿ ಹೇಳಿದರು.

ಇದನ್ನು ಸಮತಾವಾದಿ ನೀತಿ ಎಂದು ಕರೆದ ಅವರು, ಇದರಿಂದ ಶಿಕ್ಷಣದಲ್ಲಿ ಪ್ರಭುತ್ವದಂತಹ ವಿಷಯಗಳು ಕಡಿಮೆಯಾಗಲು ನೆರವಾಗಲಿದೆ.ಇದು ನಿಖರವಾದ ಬೇರೆ ಮಾರ್ಗವಾಗಿದೆ.ನಮ್ಮ ಮೇಲೆ ಹೆಚ್ಚಿನ ನಿಯಂತ್ರಣ ಹೊಂದುವ ಮೂಲಕ, ನಾವು ಹೆಚ್ಚು ಬೆಂಬಲಿಸುತ್ತಿದ್ದೇವೆ. ಆದರೆ, ಹೊಸ ಶಿಕ್ಷಣ ನೀತಿ ದೇಶದ ಕಡೆಗೆ ಗಮನ ಹರಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ತಿಳಿಸಿದರು.

ಜನರಲ್ಲಿನ ಮನಸ್ಥಿತಿಯನ್ನು ಬದಲಾಯಿಸಿ ಉದ್ಯೋಗ ಸೃಷ್ಟಿಸುವಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಇದು ಈ ನೀತಿಯ ದೊಡ್ಡ ಯಶಸ್ಸು ಆಗಿದೆ. ಎರಡು ವೃತ್ತಿಗಳನ್ನು ಆಯ್ಕೆ ಮಾಡಿಕೊಂಡ ಜನರು, ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುವುದು ಈ ನೀತಿಯ ನಮ್ಯತೆ ನೀತಿಯಾಗಿದೆ ಎಂದರು.

ವಿದ್ಯಾರ್ಥಿಗಳು ತಮ್ಮ ಆಸೆಯಂತೆ ಕಲಿಕೆಯನ್ನು ಹೊಸ ವ್ಯವಸ್ಥೆ ಪ್ರೋತ್ಸಾಹಿಸಲಿದೆ. ಇದರಲ್ಲಿ ಯಾವುದೇ ವಿರುದ್ದವಾದಂತಹ ವಿಷಯಗಳು ಇಲ್ಲದಿರುವುದರಿಂದ ಭಿನ್ನಾಭಿಪ್ರಾಯ ಇಲ್ಲ. ನೂತನ ಶಿಕ್ಷಣ ನೀತಿ ಅನುಷ್ಠಾನ ಸಂಬಂಧ ತಜ್ಞರು ರೂಪುರೇಷೆ ರಚಿಸಲಿದ್ದಾರೆ. ರೂಪುರೇಷೆ ಸಿದ್ಧಪಡಿಸಿದ ನಂತರ ಕಾರ್ಯತಂತ್ರವನ್ನು ಪರಿಚಯಿಸಲಾಗುವುದು, ಸೆಪ್ಚೆಂಬರ್ ನೊಳಗೆ ಮಸೂದೆಯನ್ನು ರಚಿಸಲಾಗುವುದು ಅಷ್ಟರೊಳಗೆ ಸಾರ್ವಜನಿಕರು ತಮ್ಮ ಪ್ರತಿಕ್ರಿಯೆಗಳನ್ನು ತಿಳಿಸಬಹುದು ಎಂದು ಅಮಿತ್ ಖರೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com