ಸುರಕ್ಷತೆ ನಿಯಮ ಉಲ್ಲಂಘನೆ: ಏರ್ ಏಷ್ಯಾ ಇಂಡಿಯಾದ ಇಬ್ಬರು ಹಿರಿಯ ಅಧಿಕಾರಿಗಳು ಸೇವೆಯಿಂದ ಅಮಾನತು

ಸುರಕ್ಷತೆ ವಿಚಾರದಲ್ಲಿ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಏರ್ ಏಷ್ಯಾ ಇಂಡಿಯಾದ ಇಬ್ಬರು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಮೂರು ತಿಂಗಳ ಕಾಲ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಭಾರತೀಯ ವಿಮಾನಯಾನ ನಿಯಂತ್ರಣ ಪ್ರಾಧಿಕಾರ ಡಿಜಿಸಿಎ ತಿಳಿಸಿದೆ.
ಏರ್ ಏಷ್ಯಾ ಇಂಡಿಯಾ
ಏರ್ ಏಷ್ಯಾ ಇಂಡಿಯಾ

ನವದೆಹಲಿ: ಸುರಕ್ಷತೆ ವಿಚಾರದಲ್ಲಿ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಏರ್ ಏಷ್ಯಾ ಇಂಡಿಯಾದ ಇಬ್ಬರು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಮೂರು ತಿಂಗಳ ಕಾಲ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಭಾರತೀಯ ವಿಮಾನಯಾನ ನಿಯಂತ್ರಣ ಪ್ರಾಧಿಕಾರ ಡಿಜಿಸಿಎ ತಿಳಿಸಿದೆ.

ಕಳೆದ ಜೂನ್ ತಿಂಗಳಲ್ಲಿ ಏರ್ ಏಷಿಯಾ ಇಂಡಿಯಾದ ಮಾಜಿ ಪೈಲಟ್ ನಡೆಸುತ್ತಿರುವ ಯೂಟ್ಯೂಬ್ ಚಾನಲ್ ಫೈಯಿಂಗ್ ಬೀಸ್ಟ್ ನಲ್ಲಿ, ಕಡಿಮೆ ವೆಚ್ಚದ ವಿಮಾನದಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

ಈ ಸಂಬಂಧ ಇಬ್ಬರು ಕಾರ್ಯನಿರ್ವಾಹಕರಾದ ಕಾರ್ಯನಿರ್ವಹಣೆ ವಿಭಾಗದ ಮುಖ್ಯಸ್ಥ ಮನೀಶ್ ಉಪ್ಪಳ್ ಮತ್ತು ವಿಮಾನದ ಸುರಕ್ಷತೆ ವಿಭಾಗದ ಮುಖ್ಯಸ್ಥ ಮುಕೇಶ್ ನೆಮ ಅವರಿಗೆ ಕಳೆದ ಜೂನ್ ನಲ್ಲಿ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ. ಇದೀಗ ಅವರನ್ನು ಮೂರು ತಿಂಗಳ ಕಾಲ ಸೇವೆಯಿಂದ ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ ಎಂದು ನಾಗರಿಕ ವಿಮಾನಯಾನದ ಮಹಾ ನಿರ್ದೇಶನಾಲಯದ ಅಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೇಳಿದರೆ ಏರ್ ಏಷಿಯಾ ಇಂಡಿಯಾ ಪ್ರತಿಕ್ರಿಯಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com